ಘಾಟ್ಶಿಲಾ/ಜೆಮ್ಶೆಡ್ಪುರ :ಘಾಟ್ಶಿಲಾ ಉಪವಿಭಾಗದ ಮುಸಾಬನಿ ಬ್ಲಾಕ್‌ನಲ್ಲಿ ಜಿಎಸ್‌ಟಿ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಮುಸಾಬಾನಿಯ ರೈಪಹಾರಿ ಗ್ರಾಮದ ನಿವಾಸಿ ಲಾಡುಮ್ ಮುರ್ಮು (48)ಗೆ ಬಾಕಿ ಇರುವ 3.5 ಕೋಟಿ ರೂ. ಜಿಎಸ್‌ಟಿ ಪಾವತಿಸುವಂತೆ ನೋಟಿಸ್ ಕಳಿಸಲಾಗಿತ್ತು. ಅವಧಿ ಮುಗಿದ್ರೂ ಲಾಡೋಮ್ ಜಿಎಸ್‌ಟಿ ಹಣ ಕಟ್ಟಿಲ್ಲ. ಈ ಹಿನ್ನೆಲೆ ಆತನನ್ನು ಬಂಧಿಸಲಾಗಿದೆ.
ಬೇರೊಬ್ಬರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಅನ್ನು ದುರುಪಯೋಗಪಡಿಸಿಕೊಂಡು ಮೆಸ್ಸರ್ ಎಸ್ ಎಸ್ ಸ್ಟೀಲ್ ಹೆಸರಿನಲ್ಲಿ ನಕಲಿ ಕಂಪನಿಯೊಂದನ್ನು ಆರಂಭಿಸಿದ್ದಾನೆ. ಆದರೆ, ಇದನ್ನು ಪರಿಶೀಲಿಸದೇ ಜಿಎಸ್‌ಟಿ ಸಂಖ್ಯೆಯನ್ನು ಕಂಪನಿಗೆ ನೀಡಿದ್ದಾರೆ. ಇದೀಗ ಜಿಎಸ್‌ಟಿ ಅಧಿಕಾರಿಗಳಿಗೆ ಕೋಟ್ಯಂತರ ರೂ. ತೆರಿಗೆ ವಂಚಿಸಿದ್ದಾನೆ.
ಈ ಕಂಪನಿಯು 2018-19ರ ನವೆಂಬರ್-ಡಿಸೆಂಬರ್‌ನಲ್ಲಿ 5,58,05,408 ರೂ.ಗಳ ಮೌಲ್ಯದ ಉಕ್ಕನ್ನು ಟ್ರಿನೆಟ್ರಾ ಟ್ರೇಡರ್ಸ್, ಓಂಕಾರ್ ಟ್ರೇಡರ್ಸ್, ತ್ರಿನಾಥ್ ಎಂಟರ್‌ಪ್ರೈಸಸ್, ಆಲಂ ಮೆಟಲ್ ಸ್ಟೋರ್, ಸಿಂಧುಜಾ ಸ್ಟೀಲ್ ಮತ್ತು ಸುಭದ್ರಾ ಟ್ರೇಡರ್ಸ್ ಅವರಿಗೆ ಒಟ್ಟು 87ಇ-ವೇ ಬಿಲ್‌ಗಳ ಮೂಲಕ ವಸ್ತುಗಳನ್ನ ಮಾರಾಟ ಮಾಡಿದೆ. ಆದರೆ, ಇಷ್ಟು ದೊಡ್ಡ ಮೊತ್ತದ ವಹಿವಾಟಿಗೆ ಜಿಎಸ್‌ಟಿ ಪಾವತಿಸಿಲ್ಲ.