ನವದೆಹಲಿ:ಗುಜರಾತ್‌ನ ದ್ವಾರಕಾದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ. ಮಧ್ಯಾಹ್ನ 3.15ಕ್ಕೆ ದ್ವಾರಕಾದಿಂದ ಸುಮಾರು 223 ಕಿಲೋಮೀಟರ್ ಉತ್ತರ-ವಾಯುವ್ಯ ಭಾಗದಲ್ಲಿ ಭೂಕಂಪ ಸಂಭವಿಸಿದೆ.
ದ್ವಾರಕಾದಲ್ಲಿ ಭೂಕಂಪ: ಗುಜರಾತ್ ಸಿಎಂಗೆ ಕರೆ ಮಾಡಿ ಸ್ಥಿತಿಗತಿ ತಿಳಿದುಕೊಂಡ ಪ್ರಧಾನಿ - ಗುಜರಾತ್ ಸುದ್ದಿ
ದ್ವಾರಕಾದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮಾಡಿದೆ.
ದ್ವಾರಕಾದಲ್ಲಿ ಭೂಕಂಪ: ಗುಜರಾತ್ ಸಿಎಂಗೆ ಕರೆ ಮಾಡಿ ಸ್ಥಿತಿಗತಿ ತಿಳಿದುಕೊಂಡ ಪ್ರಧಾನಿ
ಭೂಕಂಪದ ನಂತರ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪದ ಸುದ್ದಿ ತಿಳಿದಾಕ್ಷಣ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ಗೆ ಕರೆ ಮಾಡಿದ ಪ್ರಧಾನಿ ಮೋದಿ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಾನ್ಪುರದಲ್ಲಿ ಹೊಸದಾಗಿ 25 ಮಂದಿಗೆ ಝಿಕಾ: 36ಕ್ಕೆ ಏರಿದ ಒಟ್ಟು ಸೋಂಕಿತರು