ಮುಲುಗು (ತೆಲಂಗಾಣ):ಮೇಡಾರಂ ಜಾತ್ರೆಗೆ ತೆರಳುತ್ತಿದ್ದ ಟಿಎಸ್‌ಆರ್‌ಟಿಸಿ ಬಸ್ವೊಂದು ಕಾರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ವಜೇಡು ಮಂಡಲದ ಧ್ರಮಾರಂ ಗ್ರಾಮದ ನಿವಾಸಿಗಳಾದ ಕುಂಭಂಪತಿ ಶ್ರೀನಿವಾಸ್ (48), ಸುಜಾತ (40), ರಮೇಶ್ (45) ಹಾಗೂ ಕಾರು ಚಾಲಕ ಚಂದ್ರುಪಟ್ಲ ಗ್ರಾಮದ ಕಲ್ಯಾಣ್ (26) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶ್ರೀನಿವಾಸ್ ಅವರ ಅಣ್ಣನ ಮಗನ ಮದುವೆಗೆಂದು ಮಹಬೂಬಾಬಾದ್ ಜಿಲ್ಲೆಯ ನೆಕ್ಕೊಂಡ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಜ್ಯೋತಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.