ಸುರೇಂದ್ರನಗರ (ಗುಜರಾತ್): ಹೊಂಡದಲ್ಲಿ ಮುಳುಗಿ ಐವರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ಗುಜರಾತ್ನ ಸುರೇಂದ್ರ ನಗರ ಜಿಲ್ಲೆಯಲ್ಲಿ ನಡೆದಿದೆ. ಸ್ಥಳಕ್ಕೆ ಈಗಾಗಲೇ ಪೊಲೀಸರು, ಪರಿಣಿತ ಈಜುಗಾರರು ದೌಡಾಯಿಸಿದ್ದು ಮಕ್ಕಳ ಶವಗಳನ್ನು ಹೊರತೆಗೆಯವ ಕಾರ್ಯ ನಡೆಸುತ್ತಿದ್ದಾರೆ. ಇಲ್ಲಿನ ಮೇಥನ್ ಮತ್ತು ಸರ್ವಲ್ ಗ್ರಾಮಗಳ ನಡುವೆ ಈ ಹೊಂಡ ಇದೆ. ಐವರು ಮಕ್ಕಳು ಸ್ನಾನ ಮಾಡಲೆಂದು ಹೋದಾಗ ದುರಂತ ನಡೆದಿದೆ. ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗುಜರಾತ್: ಸ್ನಾನ ಮಾಡಲೆಂದು ಹೋಗಿ ಹೊಂಡದಲ್ಲಿ ಮುಳುಗಿ ಐವರು ಮಕ್ಕಳು ಸಾವು - ಸ್ನಾನ ಮಾಡಲೆಂದು ಹೋಗಿ ಮಕ್ಕಳು ಸಾವು
ಗುಜರಾತ್ನ ಸುರೇಂದ್ರ ನಗರ ಜಿಲ್ಲೆಯಲ್ಲಿ ಸ್ನಾನ ಮಾಡಲೆಂದು ಹೋಗಿ ಐವರು ಮಕ್ಕಳು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
![ಗುಜರಾತ್: ಸ್ನಾನ ಮಾಡಲೆಂದು ಹೋಗಿ ಹೊಂಡದಲ್ಲಿ ಮುಳುಗಿ ಐವರು ಮಕ್ಕಳು ಸಾವು ಸ್ನಾನ ಮಾಡಲೆಂದು ಹೋಗಿ ಹೊಂಡದಲ್ಲಿ ಮುಳುಗಿ ಐವರು ಮಕ್ಕಳು ಸಾವು](https://etvbharatimages.akamaized.net/etvbharat/prod-images/768-512-16004173-thumbnail-3x2-ran.jpg)
5-childrens-died-due-to-drowning-in-pond-at-gujarat