ಕರ್ನಾಟಕ

karnataka

ETV Bharat / bharat

ಸ್ನಾನಕ್ಕೆಂದು ತೆರಳಿದ್ದ ಐವರು ಮಕ್ಕಳು ಕೊಳದಲ್ಲಿ ಮುಳುಗಿ ದುರ್ಮರಣ - hajaribhag news

5-children-died-due-to-drown-in-pond-in-hazaribg
ಕೊಳದಲ್ಲಿ ಮುಳುಗಿ 5 ಮಕ್ಕಳು ದುರ್ಮರಣ

By

Published : Mar 23, 2021, 3:04 PM IST

Updated : Mar 23, 2021, 3:46 PM IST

14:41 March 23

ಕೊಳದಲ್ಲಿ ಮುಳುಗಿ 5 ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ. ಜಾರ್ಖಂಡನಲ್ಲಿಂದು ಈ ದುರಂತ ಸಂಭವಿಸಿದೆ.

ಹಜಾರಿಭಾಗ್(ಜಾರ್ಖಂಡ್):ಕೊಳದಲ್ಲಿ ಮುಳುಗಿ ಐವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಹಜಾರಿಭಾಗ್ ಜಿಲ್ಲೆಯ ಗದೋಖರ್ ಗ್ರಾಮದಲ್ಲಿ ನಡೆದಿದೆ.

ನಾಲ್ವರು ಬಾಲಕಿಯರು ಮತ್ತು ಓರ್ವ ಬಾಲಕ ಮೃತಪಟ್ಟಿದ್ದು, ಎಲ್ಲರೂ ಕೂಡಾ 12ರಿಂದ 13 ವರ್ಷದವರಾಗಿದ್ದಾರೆ. ಕಾಜಲ್ ಕುಮಾರಿ (12), ಗೋಲು ಕುಮಾರ್ (12), ನಿವಿತಾ ಕುಮಾರಿ (13), ದುರ್ಗ್​ ಕುಮಾರಿ (12), ರಿಯಾ ಕುಮಾರಿ (12) ಮೃತಪಟ್ಟವರಾಗಿದ್ದಾರೆ.

ಸ್ನಾನ ಮಾಡಲು ಕೊಳದ ಬಳಿ ತೆರಳಿದ್ದ ಮಕ್ಕಳು ಸಾವನ್ನಪ್ಪಿದ್ದು, ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Last Updated : Mar 23, 2021, 3:46 PM IST

ABOUT THE AUTHOR

...view details