ಕರ್ನಾಟಕ

karnataka

ETV Bharat / bharat

ಸೆಲೆಬ್ರಿಟಿಗಳ ಹೆಸರಿನಲ್ಲಿ 90 ಲಕ್ಷಕ್ಕೂ ಅಧಿಕ ಹಣ ವಂಚನೆ: ಐವರನ್ನು ಬಂಧಿಸಿದ ಸೈಬರ್ ಪೊಲೀಸರು - ಸಚಿನ್ ತೆಂಡೂಲ್ಕರ್

ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಕಾರ್ಡ್​ ಸೃಷ್ಟಿಸಿ ವಂಚಿಸುತ್ತಿದ್ದ ಗ್ಯಾಂಗ್​ವೊಂದನ್ನು ದೆಹಲಿಯ ಸೈಬರ್ ಪೊಲೀಸರು ಭೇದಿಸಿದ್ದಾರೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಮೊಬೈಲ್ ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತು ಜಪ್ತಿ ಮಾಡಿದ್ದಾರೆ.

Cyber police arrested 5 accused
5 ಆರೋಪಿಗಳನ್ನು ಬಂಧಿಸಿದ ಸೈಬರ್ ಪೊಲೀಸರು

By

Published : Mar 3, 2023, 8:12 PM IST

ನವದೆಹಲಿ: ಅಭಿಷೇಕ್ ಬಚ್ಚನ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಐಶ್ವರ್ಯಾ ರೈ, ಹಿಮೇಶ್ ರೇಶಮಿಯಾ, ಸುಶ್ಮಿತಾ ಸೇನ್ ಸೇರಿದಂತೆ 95 ಕ್ಕೂ ಹೆಚ್ಚು ಸೆಲೆಬ್ರಿಟಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಗ್ಯಾಂಗ್​ವೊಂದನ್ನು ಶಹದಾರ ಜಿಲ್ಲೆಯ ಸೈಬರ್ ಪೊಲೀಸ್​ರು ಭೇದಿಸಿದ್ದಾರೆ. ಈ ಅಕ್ರಮ ದಂಧೆ ಯಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಗ್ಯಾಂಗ್​ ಬಳಸುತ್ತಿದ್ದ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 10 ಮೊಬೈಲ್,1 ಲ್ಯಾಪ್‌ಟಾಪ್, 3 ಸಿಪಿಯು, 34 ನಕಲಿ ಪ್ಯಾನ್ ಕಾರ್ಡ್, 25 ನಕಲಿ ಆಧಾರ್ ಕಾರ್ಡ್, 40 ಡೆಬಿಟ್/ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಸುನೀಲ್ ಕುಮಾರ್ (45), ಪುನೀತ್ (25), ಆಸಿಫ್(32) ,ವಿಶ್ವ ಭಾಸ್ಕರ್ ಶರ್ಮಾ(42) ಮತ್ತು ಪಂಕಜ್ ಮಿಶ್ರಾ (37) ಗ್ಯಾಂಗ್​ನ ಬಂಧಿತ ಆರೋಪಿಗಳು ಎಂದು ಪೂರ್ವ ವಲಯದ ಜಂಟಿ ಸಿಪಿ ಛಾಯಾ ಶರ್ಮಾ ತಿಳಿಸಿದ್ದಾರೆ. .

ಸೆಲೆಬ್ರಿಟಿಗಳ ಹೆಸರಲ್ಲೇ ಕ್ರೆಡಿಟ್ ಕಾರ್ಡ್ : ಈ ಗ್ಯಾಂಗ್‌ವೂ ಸೆಲೆಬ್ರಿಟಿಗಳ ವೈಯಕ್ತಿಕ ವಿವರಗಳನ್ನು ಕದ್ದು ನಕಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ ರೆಡಿ ಮಾಡುತ್ತಿದ್ದರು. ಒನ್ ಕಾರ್ಡ್ ಬ್ಯಾಂಕ್‌ನಿಂದ ಸೆಲೆಬ್ರಿಟಿಗಳ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ ಪಡೆದಿದ್ದರು ಎಂದು ಛಾಯಾ ಶರ್ಮಾ ಮಾಹಿತಿ ನೀಡಿದ್ದಾರೆ. ಆ ಕ್ರೆಡಿಟ್ ಕಾರ್ಡ್‌ನ್ನೂ ಶಾಪಿಂಗ್ ಮಾಡಲು, ಹಣವನ್ನು ವರ್ಗಾಯಿಸಲು ಬಳಸಲಾಗುತ್ತದೆ. ಒನ್ ಕಾರ್ಡ್ ಬ್ಯಾಂಕ್ ದೂರಿ ನೀಡಿದ ಮೇರೆಗೆ ವಂಚಕ ಜಾಲವನ್ನೂ ಭೇದಿಸಲು ಆರಂಭಿಸಲಾಯಿತು. ಇದು ವರೆಗೆ 5 ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಆರೋಪಿಗಳನ್ನು ವಿಚಾರಣೆ ಮಾಡಿದ ವೇಳೆ 90 ಲಕ್ಷಕ್ಕೂ ಅಧಿಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಜಿಎಸ್‌ಟಿ ಆಧಾರದ ಮೇಲೆ ಸೆಲೆಬ್ರಿಟಿಗಳ ಪ್ಯಾನ್ ನಂಬರ್ ಪತ್ತೆ: ಈ ಗ್ಯಾಂಗ್​ವೂ ಜಿಎಸ್‌ಟಿ ನಂಬರ್ ಆಧಾರದ ಮೇಲೆ ಸೆಲೆಬ್ರಿಟಿಗಳ ಪ್ಯಾನ್ ನಂಬರ್ ಪತ್ತೆ ಹಚ್ಚಿ ನಕಲು ಮಾಡುತ್ತಿದ್ದರು. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ನಕಲು ಮಾಡಿ ಅವರ ಛಾಯಾಚಿತ್ರಗಳನ್ನು ಮಾಡಿಕೊಳ್ಳುತ್ತಿದ್ದರು. ಹೀಗೆ ಮಾಡುವುದರಿಂದ ದಾಖಲಾತಿಗಳ ಪರಿಶೀಲನೆ ವೇಳೆ ಸುಲಭವಾಗಲಿ ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದರು. ಇದರಿಂದ ಬ್ಯಾಂಕ್​​ನವರಿಗೆ ಯಾವುದೇ ಅನುಮಾನ ಬರುವುದಿಲ್ಲ ಎಂದು ಡಿಸಿಪಿ ರೋಹಿತ್ ಮೀನಾ ತಿಳಿಸಿದ್ದಾರೆ.

ಆರೋಪಿಯೊಬ್ಬ ಎಂಜಿನಿಯರ್​: ಆರೋಪಿ ಪಂಕಜ್ ಮಿಶ್ರಾ ಎಂಜಿನಿಯರಿಂಗ್ ಓದಿದ್ದು, ಈ ತಂಡದಲ್ಲಿ ತಾಂತ್ರಿಕ ಕೆಲಸ ಮಾಡುತ್ತಿದ್ದನು. ಇನ್ನೊಬ್ಬ ಆರೋಪಿ ವಿಶ್ವ ಭಾಸ್ಕರ್ ಶರ್ಮಾ ಸರ್ಕಾರಿ ಕಾಲೇಜಿನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದನು. ಆ ಕೆಲಸ ಬಿಟ್ಟು ಈ ಗ್ಯಾಂಗ್​ವನ್ನೂ ಸೇರಿಕೊಂಡು ವಂಚನೆಯಲ್ಲಿ ತೊಡಗಿದ್ದನು. ಆರೋಪಿ ಆಸಿಫ್ ಮತ್ತು ಪುನೀತ್ ಆಧಾರ್ ಕಾರ್ಡ್ ಹಾಗೂ ಹಣ ವರ್ಗಾವಣೆ ಕೇಂದ್ರ ನಡೆಸುತ್ತಿದ್ದರು. ಸುನೀಲ್ ಕುಮಾರ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಇದನ್ನೇ ಉಪಯೋಗಿಸಿಕೊಂಡು ನಕಲಿ ದಾಖಲೆಗಳನ್ನು ಮಾಡಿ ಜನರನ್ನು ವಂಚಿಸಲು ಆರಂಭಿಸಿದ್ದರು. ಇದರೊಂದಿಗೆ ಚೀನಾ ಸಾಲದ ಆ್ಯಪ್ ಮೂಲಕವೂ ಈ ಗ್ಯಾಂಗ್ ಜನರನ್ನು ವಂಚಿಸಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂಓದಿ:ಆನೇಕಲ್: ಯುವತಿಯ ಕೈ, ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಕಳ್ಳರು

ABOUT THE AUTHOR

...view details