ಕರ್ನಾಟಕ

karnataka

ETV Bharat / bharat

ಗುಜರಾತ್​ನ ಕಛ್​ ಬಂದರಿನಲ್ಲಿ ಪಾಕಿಸ್ತಾನದಿಂದ ಸಾಗಿಸುತ್ತಿದ್ದ 48 ಕೆಜಿ ಡ್ರಗ್ಸ್ ವಶ - ಕಛ್​ನಲ್ಲಿ ಡ್ರಗ್ಸ್​ ಜಪ್ತಿ

ದಾಳಿ ವೇಳೆ ನಡೆಸಿದ ತಪಾಸಣೆಯಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ 2 ಚೀಲಗಳಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ. ಬಳಿಕ ಡ್ರಗ್ಸ್​ ಇದ್ದ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ..

48-kg-drugs-seized-from-kutch
48 ಕೆಜಿ ಡ್ರಗ್ಸ್ ವಶ

By

Published : Jun 5, 2022, 5:54 PM IST

ಕಛ್(ಗುಜರಾತ್​) :ಗುಜರಾತ್​ನ ಗಡಿ ಜಿಲ್ಲೆ ಕಛ್‌ನ ಸಮುದ್ರ ಗಡಿಯಿಂದ ಮಾದಕ ವಸ್ತುಗಳ ಸಾಗಣೆ ಪತ್ತೆ ಪ್ರಕರಣ ನಡೆಯುತ್ತಲೇ ಇವೆ. ಇಂದು ಕೂಡ ಜಖೌ ಕಡಲ ತೀರದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 48 ಕೆಜಿ ಮಾದಕ ವಸ್ತುವನ್ನು ಗಸ್ತಿನಲ್ಲಿದ್ದ ಬಿಎಸ್‌ಎಫ್ ಯೋಧರು ಮತ್ತು ಪೊಲೀಸ್ ತಂಡ ವಶಕ್ಕೆ ಪಡೆದಿದೆ.

ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದ ಬೋಟ್‌ನಿಂದ ಸಾಗಿಸಲಾಗುತ್ತಿದ್ದ ಮಾದಕವಸ್ತುವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಮತ್ತೊಂದು ಅಕ್ರಮ ಸಾಗಣೆ ಪ್ರಕರಣವನ್ನು ಬೇಧಿಸಲಾಗಿದೆ. ಪಾಕಿಸ್ತಾನದ ಬೋಟ್​ನಿಂದ ಭಾರತಕ್ಕೆ 'ಚರಸ್​' ಎಂಬ ಮಾದಕ ವಸ್ತುವನ್ನು ತರಲಾಗುತ್ತಿತ್ತು.

ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ತಪಾಸಣೆ ಮಾಡುತ್ತಿದ್ದುದನ್ನು ಕಂಡು ಪ್ಯಾಕೆಟ್​ ಸಮೇತ ಡ್ರಗ್ಸ್​ ನದಿಗೆ ಎಸೆಯಲಾಗಿತ್ತು. ಬಳಿಕ ಅದನ್ನು ಮೇಲೆತ್ತಿ ಗೌಪ್ಯವಾಗಿ ಸಾಗಿಸಲಾಗುತ್ತಿತ್ತು.

ದಾಳಿ ವೇಳೆ ನಡೆಸಿದ ತಪಾಸಣೆಯಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ 2 ಚೀಲಗಳಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ. ಬಳಿಕ ಡ್ರಗ್ಸ್​ ಇದ್ದ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.

ಓದಿ:ಹೈದರಾಬಾದ್‌ ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details