ಗಾಂಧಿನಗರ (ಗುಜರಾತ್): ಕೊರೊನಾ ವೈರಸ್ ಅನ್ನು ಹೊಡೆದೋಡಿಸಬೇಕು, ಸಾಂಕ್ರಾಮಿಕವನ್ನು ನಿರ್ಮೂಲನೆ ಮಾಡಬೇಕೆಂದು ಕೋವಿಡ್ ನಿಯಮ ಉಲ್ಲಂಘಿಸಿ ಧಾರ್ಮಿಕ ಮೆರವಣಿಗೆ ನಡೆಸಿದ ಕಾರಣ 46 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊರೊನಾ ನಿರ್ಮೂಲನೆಗೆ ನಿಯಮ ಮೀರಿ ಧಾರ್ಮಿಕ ಮೆರವಣಿಗೆ: 46 ಮಂದಿ ಅರೆಸ್ಟ್ - ಕೋವಿಡ್ ಸಾಂಕ್ರಾಮಿಕ
ಕೋವಿಡ್ ಸಾಂಕ್ರಾಮಿಕವು ದೇವರ ಶಾಪವಾಗಿದೆ ಎಂದುಕೊಂಡು ಗುಜರಾತ್ನ ಗಾಂಧಿನಗರದ ರಾಯ್‌ಪುರ ಗ್ರಾಮದ ಜನರು ಕೊರೊನಾ ನಿಯಮ ಉಲ್ಲಂಘಿಸಿ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಕೊರೊನಾ ನಿರ್ಮೂಲನೆಗೆ ನಿಯಮ ಮೀರಿ ಧಾರ್ಮಿಕ ಮೆರವಣಿಗೆ
ಕೊರೊನಾ ನಿರ್ಮೂಲನೆಗೆ ನಿಯಮ ಮೀರಿ ಧಾರ್ಮಿಕ ಮೆರವಣಿಗೆ
ಗುಜರಾತ್ನ ಗಾಂಧಿನಗರದ ರಾಯ್‌ಪುರ ಗ್ರಾಮದಲ್ಲಿನ ಜನರು ಕೋವಿಡ್ ಸಾಂಕ್ರಾಮಿಕವು ಬಲಿಯಾದೇವ್ ಮಹಾರಾಜ್ ದೇವರ ಶಾಪವಾಗಿದೆ ಎಂದು ನಂಬಿ, ಬಲಿಯಾದೇವ್ ದೇಗುಲಕ್ಕೆ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ಮಾಡಿಕೊಂಡು ತೆರಳಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು 46 ಜನರನ್ನು ಬಂಧಿಸಿದ್ದಾರೆ ಎಂದು ಗಾಂಧಿನಗರ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ ರಾಣಾ ತಿಳಿಸಿದ್ದಾರೆ.