ಅಹಮದಾಬಾದ್: ಕರ್ನಾಟಕ, ಕೇರಳದ ಕರಾವಳಿಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತ ಗುಜರಾತಿಗೆ ತಲುಪಿದ್ದು, ಸುಮಾರು 45 ಜನರನ್ನು ಬಲಿ ಪಡೆದಿದೆ.
ಗುಜರಾತ್ನಲ್ಲಿ ತೌಕ್ತೆ ಅಬ್ಬರಕ್ಕೆ ಇದುವರೆಗೆ 45 ಮಂದಿ ಬಲಿ - Tauktae Cyclone
ಕೇರಳದ ಮೂಲಕ ಪ್ರವೇಶಿಸಿದ ತೌಕ್ತೆ ಚಂಡಮಾರುತ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ತೀವ್ರ ಹಾನಿಯುಂಟು ಮಾಡಿದ ಬಳಿಕ ಇದೀಗ ಗುಜರಾತ್ನಲ್ಲಿ ಅಬ್ಬರಿಸಿದೆ.
ಗುಜರಾತ್ ಚಂಡಮಾರುತ
ಅಮ್ರೇಲಿ ನಗರವೊಂದಲ್ಲೇ ವಿವಿಧ ಕಾರಣಗಳಿಂದ 15 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಐದು ಮಂದಿ ಭಾವ್ನಗರ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಚಂಡಮಾರುತದಿಂದ ಎರಡು ಪ್ರಮುಖ ಸೋಲಾರ್ ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿದೆ. ಹಾನಿಯಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಗಂಟೆಗೆ 165 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಸೋಮವಾರ ರಾತ್ರಿ ದಿಯು ಮತ್ತು ಉನಾ ಕಡಲ ತೀರಗಳಿಗೆ ಅಪ್ಪಳಿಸಿದ್ದು, ಬಳಿಕ ಸೌರಾಷ್ಟ್ರ ಜಿಲ್ಲೆಯಲ್ಲಿ ಭಾರೀ ಹಾನಿಯುಂಟು ಮಾಡಿದೆ.
Last Updated : May 19, 2021, 1:28 PM IST