ಉತ್ತರ ಪ್ರದೇಶ(ಕಾನ್ಪುರ):ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಾಂಡುನಗರ ಶಾಖೆಯಲ್ಲಿ 42 ಲಕ್ಷ ರೂಪಾಯಿ ನೋಟುಗಳು ಕೊಳೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆರ್‌ಬಿಐನ ಲೆಕ್ಕಪರಿಶೋಧನೆಯಲ್ಲಿ ಚೆಸ್ಟ್ ಕರೆನ್ಸಿಯಲ್ಲಿ 42 ಲಕ್ಷ ರೂಪಾಯಿ ಇಳಿಕೆಯಾದ ನಂತರ ಈ ವಿಚಾರ ಬಹಿರಂಗವಾಗಿದೆ. ಬ್ರಾಂಚ್ಗೆ ಚರಂಡಿ ನೀರು ನುಗ್ಗಿದ್ದು, ನೋಟು ಕೊಳೆಯಲು ಕಾರಣ ಎನ್ನಲಾಗುತ್ತಿದೆ. ನಿರ್ಲಕ್ಷ್ಯ ತೋರಿದ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದೇವಿ ಶಂಕರ್, ಆಶಾ ರಾಮ್, ರಾಕೇಶ್ ಕುಮಾರ್ ಮತ್ತು ಭಾಸ್ಕರ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಇದು ಇಡೀ ನಗರದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.
ಲೆಕ್ಕ ಪರಿಶೋಧನೆಯನ್ನು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ನಿರ್ವಹಿಸಿದ್ದಾರೆ. ಇದರಲ್ಲಿ ಹಣದ ಕೊರತೆ ಮರೆಮಾಚುವ ಮೂಲಕ ಕಳೆದು ಹೋದ ಹಣವನ್ನು ಎಣಿಸುವ ಕೆಲಸ ವಾರಗಟ್ಟಲೆ ನಡೆಯಿತು. ಆರಂಭದಲ್ಲಿ ಕೆಲವು ಲಕ್ಷಗಳ ಕೊರತೆಯಿತ್ತು. ಎಣಿಕೆಯ ಅಂತ್ಯದ ವೇಳೆಗೆ ಅದು 42 ಲಕ್ಷಕ್ಕೆ ತಲುಪಿತು. ಈ ಘಟನೆಯ ನಂತರ, ಬ್ಯಾಂಕ್‌ನ ಝೋನಲ್ ಆಡಿಟ್ ಮತ್ತು ವಿಜಿಲೆನ್ಸ್ ತಂಡವು ಬ್ರಾಂಚ್ ಪರಿಶೀಲನೆ ನಡೆಸಿದೆ. ಕೊನೆಗೆ 42 ಲಕ್ಷದ ಕೊರತೆ ನೀಗಿಸಲು ಬ್ಯಾಂಕ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಯಿತು.