ಮುಂಬೈ (ಮಹಾರಾಷ್ಟ್ರ): ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ. ಕೊರೊನಾ ಮೂರನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ ಎಂಬ ಭೀತಿಯ ನಡುವೆಯೂ ಬಿಜೆಪಿ ಜನಾಶೀರ್ವಾದ ಯಾತ್ರೆ ಕೈಗೊಂಡಿರುವುದಕ್ಕೆ ನಾಯಕರು, ಕಾರ್ಯಕರ್ತರು ಹಾಗೂ ಜನರು ಗುಂಪಾಗಿ ಸೇರುವ ಮೂಲಕ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ ಪ್ರಕರಣ ವರದಿಯಾಗುತ್ತಿವೆ.
ಈ ಮಧ್ಯೆ ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕ, ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದರು. ಈ ವೇಳೆ ನಾರಾಯಣ ರಾಣೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆ ಮಹಾರಾಷ್ಟ್ರದಲ್ಲಿ ನಾರಾಯಣ್ ರಾಣೆ ವಿರುದ್ಧ ಬರೋಬ್ಬರಿ 42 ಎಫ್ಐಆರ್ಗಳು ದಾಖಲಾಗಿವೆ. ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಹಲವು ಸೆಕ್ಷನ್ಗಳಡಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ಕಲ್ಯಾಣ್ ಸಿಂಗ್ ಭಾಷಣಗಳ ಸಂಕಲನವನ್ನು ಬಿಡುಗಡೆ ಮಾಡಲು ಯುಪಿ ಸರ್ಕಾರ ನಿರ್ಧಾರ
ಇತ್ತ ರಾಜ್ಯದಲ್ಲೂ ಸಹ ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದು, ಇಲ್ಲಿಯೂ ಸಹ ನಾಯಕರು ಕೊರೊನಾ ನಿಯಮಗಳಿಗೆ ಕ್ಯಾರೆ ಎನ್ನದೇ ಕಾರ್ಯಕ್ರಮ ನಡೆಸುತ್ತಿರುವುದು ಕಂಡು ಬಂದಿದೆ. ಜವಾಬ್ದಾರಿಯುತ ನಾಯಕರು ಜವಾಬ್ದಾರಿ ಮರೆತು ನಡೆಸುತ್ತಿರುವ ಈ ಜನಾಶೀರ್ವಾದ ಯಾತ್ರೆ ಎಷ್ಟು ಸರಿ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.