ಕರ್ನಾಟಕ

karnataka

ETV Bharat / bharat

ಎರಡು ದಿನದಲ್ಲಿ ಪೊಲೀಸರಿಂದ 42 ಮಕ್ಕಳ ರಕ್ಷಣೆ: ಅವರ ಭವಿಷ್ಯ ರೂಪಿಸಲು ಮುಂದಾದ ಅಸ್ಸೋಂ ಸಿಎಂ ಶರ್ಮಾ - ಗುಹಾವಟಿ

ಮಾದಕವಸ್ತು, ಜಾನುವಾರು ಮತ್ತು ಮಾನವ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸಿದ ಅಸ್ಸೋಂ ಪೊಲೀಸರು, ಕಳೆದ ಎರಡು ದಿನಗಳಲ್ಲಿ 42 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

42 children rescued from Sikkim by Assam Police in last 2 days: Himanta Biswa Sarma
ಸಿಎಂ ಹಿಮಂತ್ ಬಿಸ್ವಾ ಶರ್ಮಾ

By

Published : Jul 24, 2021, 11:11 AM IST

ಗುಹಾವಟಿ ( ಅಸ್ಸಾಂ) : ಕಳೆದ ಎರಡು ದಿನಗಳಲ್ಲಿ ಅಸ್ಸೋಂ ಪೊಲೀಸರು 9 ರಿಂದ 18 ವರ್ಷದೊಳಗಿನ 42 ಮಕ್ಕಳನ್ನು ಸಿಕ್ಕೀಂನಿಂದ ರಕ್ಷಿಸಿದ್ದಾರೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಆ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿದ ಮಾತನಾಡಿದ ಅವರು, ಒಟ್ಟು 107 ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ.

ಕಳೆದ ಎರಡು ತಿಂಗಳಲ್ಲಿ, ಅಸ್ಸೋಂ ಪೊಲೀಸರು ಮಾದಕವಸ್ತು, ಜಾನುವಾರು ಮತ್ತು ಮಾನವ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 107 ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಲಾಗಿದೆ ಸಿಎಂ ಶರ್ಮಾ ಮಾಹಿತಿ ನೀಡಿದ್ದಾರೆ.

ಓದಿ : ಕಾಶ್ಮೀರದಲ್ಲಿ ಎನ್​ಕೌಂಟರ್​: ಇಬ್ಬರು ಉಗ್ರರನ್ನು ಸದೆಬಡಿದ ಯೋಧರು

ಕಳೆದ ಎರಡು ದಿನಗಳಲ್ಲಿ 9 ರಿಂದ 18 ವರ್ಷದೊಳಗಿನ 42 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಈ ಮಕ್ಕಳನ್ನು ಶಿಕ್ಷಣದ ಹೆಸರಿನಲ್ಲಿ ಕರೆದೊಯ್ದು ಕೆಲಸ ಮಾಡಿಸಲಾಗುತ್ತಿತ್ತು. ಮುಂದಿನ ಐದಾರು ದಿನಗಳಲ್ಲಿ ಈ ಮಕ್ಕಳ ಗ್ರಾಮಗಳಿಗೆ ನೇರವಾಗಿ ಭೇಟಿ ನೀಡಿ ಅವರ ಭವಿಷ್ಯ ರೂಪಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ABOUT THE AUTHOR

...view details