ನವದೆಹಲಿ:ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಮಂಜೂರಾಗಿರುವ 1,104 ನ್ಯಾಯಾಧೀಶರ ಪೈಕಿ 699 ನ್ಯಾಯಾಧೀಶರಿದ್ದು, 405 ಹುದ್ದೆಗಳು ಖಾಲಿ ಇವೆ ಎಂದು ಶುಕ್ರವಾರ ಸಂಸತ್ತಿಗೆ ಕೇಂದ್ರ ಸರ್ಕಾರ ತಿಳಿಸಿದೆ. ಖಾಲಿ ಇರುವ 405 ಖಾಲಿ ಹುದ್ದೆಗಳಲ್ಲಿ 175 ಹುದ್ದೆಗಳ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಕೊಲಿಜಿಯಂ ನಡುವೆ ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು ಉತ್ತರಿಸಿದ್ದಾರೆ.
ಉಳಿದ 230 ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಹೈಕೋರ್ಟ್ ಕೊಲಿಜಿಯಂಗಳಿಂದ ಶಿಫಾರಸುಗಳನ್ನು ಸ್ವೀಕರಿಸಬೇಕಾಗಿದೆ. ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ನಿರಂತರ, ಸಹಯೋಗದ ಪ್ರಕ್ರಿಯೆಯಾಗಿದೆ ಎಂದು ರಿಜಿಜು ಹೇಳಿದ್ದಾರೆ. ನ್ಯಾಯಾಧೀಶರ ನೇಮಕಕ್ಕೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ವಿವಿಧ ಸಾಂವಿಧಾನಿಕ ಅಧಿಕಾರಿಗಳಿಂದ ಸಮಾಲೋಚನೆ ಮತ್ತು ಅನುಮೋದನೆಯ ಅಗತ್ಯವಿದೆ ಎಂದು ರಿಜಿಜು ತಿಳಿಸಿದ್ದಾರೆ.