ಬಿಜಾಪುರ (ಛತ್ತೀಸ್‌ಗಢ): ಶನಿವಾರ - ಭಾನುವಾರ ಛತ್ತೀಸ್‌ಗಢದಲ್ಲಿ ನಡೆದ ಭೀಕರ ಎನ್ಕೌಂಟರ್ ವೇಳೆ ಸುಮಾರು 400 ಮಂದಿ ನಕ್ಸಲರು ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದರು ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.
ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ಮಾವೋವಾದಿ ಕಮಾಂಡರ್ ಆಗಿರುವ ಹಿಡ್ಮಾ ಹಾಗೂ ಈತನ ಸಹಚರ ಸುಜಾತಾನನ್ನು ಸೆರೆಹಿಡಿಯಲು ಸಿಆರ್‌ಪಿಎಫ್ ಯೋಧರು ಸೇರಿದಂತೆ ಸುಮಾರು 1500 ಭದ್ರತಾ ಸಿಬ್ಬಂದಿಯನ್ನು ಸುಕ್ಮಾ - ಬಿಜಾಪುರ ಪ್ರದೇಶದಲ್ಲಿ ಆರು ಶಿಬಿರಗಳಲ್ಲಿ ನಿಯೋಜಿಸಲಾಗಿತ್ತು.
ಹಿಡ್ಮಾ, ಈತ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದು, ಈತನ ಬಗ್ಗೆ ಸುಳಿವು ನೀಡಿದವರಿಗೆ 40 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಛತ್ತೀಸ್‌ಗಢ ಪೊಲೀಸರು ಘೋಷಿಸಿದ್ದರು. 2011ರಲ್ಲಿ ಸುಕ್ಮಾದಲ್ಲಿ ನಡೆದ ದಾಳಿಯಲ್ಲಿ 25 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. 2013ರಲ್ಲಿ ನಡೆದ ದಾಳಿಗಳಲ್ಲಿ ಕಾಂಗ್ರೆಸ್ ನಾಯಕರು, ಭದ್ರತಾ ಸಿಬ್ಬಂದಿ ಸೇರಿದಂತೆ 32 ಮಂದಿ ಪ್ರಾಣಕಳೆದುಕೊಂಡಿದ್ದರು. ಈ ದಾಳಿಗಳ ಹಿಂದೆ ಹಿಡ್ಮಾ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದರು.