ಕರ್ನಾಟಕ

karnataka

ETV Bharat / bharat

ಒಂದೇ ಹಾಸ್ಟೆಲ್​ನ 40 ವಿದ್ಯಾರ್ಥಿಗಳಿಗೆ ತಗುಲಿದ ಕೊರೊನಾ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ಹಾಸ್ಟೆಲ್​ನ 40 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

40 hostel students test positive in Maharashtra
ಒಂದೇ ಹಾಸ್ಟೆಲ್​ನ 40 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

By

Published : Feb 23, 2021, 3:00 PM IST

ಲಾತೂರ್ (ಮಹಾರಾಷ್ಟ್ರ): ಒಂದೇ ಹಾಸ್ಟೆಲ್​ನ 40 ಮಂದಿ ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿರುವ ಘಟನೆ ಮಹಾರಾಷ್ಟ್ರದ ಲಾತೂರ್ ನಗರದದ ಎಂಐಡಿಸಿ ಪ್ರದೇಶದಲ್ಲಿ ನಡೆದಿದೆ.

ಹಾಸ್ಟೆಲ್​ನ ಓರ್ವ ಬಾಲಕಿಗೆ ಕೊರೊನಾ ಸೋಂಕು ಕಂಡು ಬಂದ ನಂತರ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಿದಾಗ 40 ಮಂದಿಗೆ ಪಾಸಿಟಿವ್​ ಬಂದಿದೆ.

ಮಹಾರಾಷ್ಟದಲ್ಲಿ ಈಗ ಕೊರೊನಾ ಸೋಂಕಿತರು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸೋಮವಾರ 5,210 ಹೊಸ ಪ್ರಕರಣಗಳು ಕಂಡುಬಂದಿವೆ. ಮುಂಬೈ ನಗರದಲ್ಲಿ ದಿನಕ್ಕೆ ಸುಮಾರು 900ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ.

ಇದನ್ನೂ ಓದಿ:ನನಗೆ ಯಾವ ಬುಲಾವೂ​ ಬಂದಿಲ್ಲ, ಬೇರೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ಯತ್ನಾಳ್​ ಸ್ಪಷ್ಟನೆ

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಅಮರಾವತಿ, ಮುಂಬೈ, ನಾಗಪುರ, ಪುಣೆಮ ಪಿಂಪ್ರಿ, ನಾಸಿಕ್, ಔರಂಗಾಬಾದ್, ಥಾಣೆ ಮುಂತಾದ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಕೂಡ ಹಾಕಲಾಗಿದೆ.

ಬುಲ್ಡಾನಾ ನಗರದ ಚಿಕಾಲಿ, ಖಾಮಗಾಂವ್, ಮಲ್ಕಾಪುರ ಮುಂತಾದ ಸ್ಥಳಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ ಎಂದು ಬುಲ್ಡಾನಾ ಸಹಾಯಕ ಜಿಲ್ಲಾಧಿಕಾರಿ ದಿನೇಶ್ ಗೀತೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details