ಸೀತಾಪುರ (ಉತ್ತರ ಪ್ರದೇಶ): ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ ಬಳಿಕ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಮಹಮೂದಾಬಾದ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಮಕ್ಕಳು, ವೃದ್ಧರು ಸೇರಿ ಇಲ್ಲಿ ಊಟ ಮಾಡಿದ 40ಕ್ಕೂ ಹೆಚ್ಚು ಜನರ ಆರೋಗ್ಯ ಹದಗೆಟ್ಟಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.