ಕರ್ನಾಟಕ

karnataka

ETV Bharat / bharat

40 ಬಂಡಾಯ ಶಾಸಕರು ಸತ್ತಿದ್ದಾರೆ, ಅವರ ಆತ್ಮಗಳು ಮಾತ್ರ ಗುವಾಹಟಿಯಲ್ಲಿವೆ: ಸಂಜಯ್​ ರಾವತ್​ - ಶಿವಸೇನೆ ಸಂಸದ ಸಂಜಯ್​ ರಾವತ್​

ಬಂಡಾಯ ಶಾಸಕರು ಮತ್ತು ಸಂಸದ ಸಂಜಯ್​ ರಾವತ್​ ಮಧ್ಯೆ ಮಾತಿನ ಬಾಣಗಳು ನಿಂತಿಲ್ಲ. ಗುವಾಹಟಿಯಲ್ಲಿ ಬೀಡುಬಿಟ್ಟ ಶಾಸಕರ ವಿರುದ್ಧ ಕಿಡಿಕಾರಿರುವ ಶಿವಸೇನೆ ಸಂಸದ, 'ಶಿವಸೈನಿಕರಲ್ಲಿ ಹೊತ್ತಿಕೊಂಡಿರುವ ಜ್ವಾಲೆ ನಿಮ್ಮನ್ನು ದಹಿಸದೇ ಬಿಡದು' ಎಂದು ಗುಡುಗಿದ್ದಾರೆ.

40 ಬಂಡಾಯ ಶಾಸಕರು ಸತ್ತಿದ್ದಾರೆ, ಅವರ ಆತ್ಮಗಳು ಮಾತ್ರ ಗುವಾಹಟಿಯಲ್ಲಿವೆ: ಸಂಜಯ್​ ರಾವತ್​
40 ಬಂಡಾಯ ಶಾಸಕರು ಸತ್ತಿದ್ದಾರೆ, ಅವರ ಆತ್ಮಗಳು ಮಾತ್ರ ಗುವಾಹಟಿಯಲ್ಲಿವೆ: ಸಂಜಯ್​ ರಾವತ್​

By

Published : Jun 26, 2022, 7:33 PM IST

ಮುಂಬೈ:ಶಿವಸೇನೆ ನಾಯಕತ್ವದ ವಿರುದ್ಧ ಬಂಡೆದ್ದ ರೆಬೆಲ್​ ನಾಯಕ ಏಕನಾಥ್​ ಶಿಂದೆ ಬಣಕ್ಕೆ ಕೆಲ ದಿನಗಳ ಹಿಂದಷ್ಟೇ ಎಚ್ಚರಿಕೆ ನೀಡಿದ್ದ ಸಂಸದ ಸಂಜಯ್​ ರಾವತ್​ ಇಂದು ಮತ್ತೆ ಬೆದರಿಕೆಯ ಮಾತುಗಳನ್ನಾಡಿದ್ದಾರೆ. ಗುವಾಹಟಿಯಲ್ಲಿ ಮೊಕ್ಕಾಂ ಹೂಡಿರುವ 40 ಶಾಸಕರು ಜೀವಂತ ಶವಗಳಿದ್ದಂತೆ. ಅವರ ಆತ್ಮಗಳು ಈಗಾಗಲೇ ದಹಿಸಿವೆ. ಆ ಬಣ ಮಹಾರಾಷ್ಟ್ರಕ್ಕೆ ಹಿಂತಿರುಗಿದಾಗ ಮರಣೋತ್ತರ ಪರೀಕ್ಷೆಗಾಗಿ ಅವರ ದೇಹಗಳನ್ನು ನೇರವಾಗಿ ಅಸೆಂಬ್ಲಿಗೆ ಕಳುಹಿಸಲಾಗುತ್ತದೆ. ಇಲ್ಲಿ ಹೊತ್ತಿಕೊಂಡಿರುವ ಬೆಂಕಿ ಅವರನ್ನು ಏನು ಮಾಡಬಹುದು ಎಂಬುದು ಅವರಿಗೆ ತಿಳಿದಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಶಿವಸೇನೆ ನಾಯಕ ಸಂಜಯ್ ರಾವತ್​, 'ಬಂಡಾಯ ನಾಯಕರ ಕಚೇರಿಗಳು ಪುಡಿಪುಡಿಯಾಗಲಿವೆ. ಅವರು ಮುಂಬೈಗೆ ಬಂದರೆ ಶಿವಸೈನಿಕರು ಏನು ಮಾಡಲಿದ್ದಾರೆ ಗೊತ್ತೇ' ಎಂದು ಧಮ್ಕಿ ಹಾಕುವ ಮಾತುಗಳನ್ನಾಡಿದ್ದರು. ಇದೀಗ ಶಿವಸೈನಿಕರ ಮನಸ್ಸಿನಲ್ಲಿ ಹೊತ್ತಿಕೊಂಡಿರುವ ಬೆಂಕಿ ಅವರನ್ನು ಸುಡದೇ ಬಿಡದು ಎಂಬ ಹೇಳಿಕೆ ನೀಡಿ ಪರೋಕ್ಷವಾಗಿ ಬೆದರಿಕೆಯ ಮಾತುಗಳನ್ನಾಡಿದ್ದಾರೆ ಎನ್ನಲಾಗ್ತಿದೆ. ಇಂದು ಬೆಳಗ್ಗೆ ಮಾತನಾಡಿದ್ದ ರಾವತ್​, ನೀವು ಒಬ್ಬ ತಂದೆಯ ಮಕ್ಕಳಾಗಿದ್ದರೆ, ತಕ್ಷಣವೇ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಿ. ನಿಮ್ಮೆಲ್ಲರನ್ನೂ ನಾವು ಸೋಲಿಸುತ್ತೇವೆ ಎಂದು ಸವಾಲು ಹಾಕಿದ್ದರು.

50 ಕೋಟಿ ಕಿಕ್​ಬ್ಯಾಕ್ ಆರೋಪ:ರೆಬೆಲ್​ ಶಾಸಕರು 50 ಕೋಟಿ ರೂಪಾಯಿ ಲಂಚವನ್ನು ಪಡೆದುಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿರುವ ರಾವತ್​, ಇದು ಶಿವಸೇನೆಯ ಶಕ್ತಿಯನ್ನು ಕುಗ್ಗಿಸುವುದಿಲ್ಲ. ಏಕನಾಥ್​ ಶಿಂದೆ ಅವರು 2019 ರಲ್ಲಿಯೇ ಬಿಜೆಪಿ ಕಾರಣಕ್ಕಾಗಿ ಸಿಎಂ ಸ್ಥಾನ ವಂಚಿತರಾಗಿದ್ದರು. ಇದೀಗ ಅವರ ಜೊತೆ ಕೂಡಿ ಸಿಎಂ ಆಗುವ ಆಸೆ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಆಗ ಇಲ್ಲದ ಸಮಸ್ಯೆ ಈಗೇಕೆ:ಎನ್​ಸಿಪಿ ನಾಯಕ ಶರದ್​ ಪವಾರ್​ ಬಂಡಾಯ ಬಣದ ಬಗ್ಗೆ ಮಾತನಾಡಿ, ಏಕನಾಥ್​ ಶಿಂದೆ ಮತ್ತು ಇತರ ಶಾಸಕರು ಎನ್​ಸಿಪಿ ಮತ್ತು ಕಾಂಗ್ರೆಸ್​ ಜೊತೆಗೂಡಿ ಸರ್ಕಾರ ಮಾಡಿದಾಗ ಜೊತೆಗಿದ್ದರು. 2.5 ವರ್ಷಗಳಿಂದ ಇವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಈಗ ಮಾತ್ರ ತೊಂದರೆಯಾಯಿತೇ ಎಂದು ಪ್ರಶ್ನಿಸಿದ್ದಾರೆ.

ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಎನ್​ಸಿಪಿ ಬೆಂಬಲ ಮುಂದುವರಿಯಲಿದೆ. ಕೊನೆಯ ನಿಮಿಷದವರೆಗೂ ನಾವು ಠಾಕ್ರೆ ಅವರನ್ನು ಬೆಂಬಲಿಸುತ್ತೇವೆ. ಏಕನಾಥ್​ ಶಿಂದೆ ಮತ್ತು ಅವರ ಬಣ ಹೊಸ ಮೈತ್ರಿಗೆ ಬೇಡಿಕೆ ಇಟ್ಟಿದೆ. ಆದರೆ, ರಾಜ್ಯದಲ್ಲಿ 'ಮಹಾಅಘಾಡಿ' ಸರ್ಕಾರವಿದೆ. ಇದಕ್ಕೆ ಕಾಂಗ್ರೆಸ್​ ಮತ್ತು ಎನ್​ಸಿಪಿಯ ಸಪೋರ್ಟ್​ ಇರಲಿದೆ ಎಂದು ಶರದ್​ ಪವಾರ್​ ಹೇಳಿದ್ದಾರೆ.

ಓದಿ;ಅಮೃತಸರದ ಸಿಮ್ರಂಜಿತ್ ಸಿಂಗ್ ಮಾನ್ ಸಂಗ್ರೂರ್​​ ವಿಜಯಿ: ಪಂಜಾಬ್ ಉಪಚುನಾವಣೆಯಲ್ಲಿ ಎಎಪಿಗೆ ಭಾರಿ ಹಿನ್ನಡೆ

ABOUT THE AUTHOR

...view details