ನವದೆಹಲಿ:ದೇಶಾದ್ಯಂತ ಮಳೆ, ಗಾಳಿ ಜೋರಾಗಿದೆ. ಮಿಂಚಿನೇಟಿಗೆ ಬಿಹಾರ, ಉತ್ತರಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ 40 ಮಂದಿ ಬಲಿಯಾಗಿರುವುದು ವರದಿಯಾಗಿದೆ. ಬಿಹಾರದಲ್ಲಿ 20 ಮಂದಿ ಸಿಡಿಲಿಗೆ ಅಸುನೀಗಿದರೆ, ಉತ್ತರಪ್ರದೇಶದಲ್ಲಿ 18, ಜಾರ್ಖಂಡ್‌ನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಮಿಂಚಿನ ಅಬ್ಬರ ಜೋರಾಗಿದ್ದು, ಮಂಗಳವಾರ ಒಂದೇ ದಿನ 38 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದ 8 ಜಿಲ್ಲೆಗಳಲ್ಲಿ ಕೈಮೂರ್ ಜಿಲ್ಲೆಯೊಂದರಲ್ಲೇ 7 ಮಂದಿ, ಭೋಜ್‌ಪುರ ಮತ್ತು ಪಾಟ್ನಾದಲ್ಲಿ ತಲಾ ನಾಲ್ವರು ಮತ್ತು ಜಹಾನಾಬಾದ್, ಅರ್ವಾಲ್, ರೋಹ್ತಾಶ್, ಸಿವಾನ್ ಮತ್ತು ಔರಂಗಾಬಾದ್‌ನಲ್ಲಿ ತಲಾ ಒಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.