ರಾಜಸ್ಥಾನ್/ಜಾಲೋರ್: ನಾಲ್ಕು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸೋದರ ಮಾವನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜಸ್ಥಾನದ ಜಾಲೋರ್ನಲ್ಲಿ ನಡೆದಿದೆ. ಆರೋಪಿ ನಾರಾಯಣ ಜಿಲ್ಲೆಯ ಲೇಟಾ ಗ್ರಾಮದ ನಿವಾಸಿಯಾಗಿದ್ದು, ಬಾಲಕಿಗೆ ಸೋದರ ಮಾವನಾಗಬೇಕು.
ಬುಧವಾರ ಸಂಬಂಧಿಕರ ಮನೆಗೆ ಬಂದ ಆರೋಪಿ, ಮಧ್ಯಾಹ್ನ ಬಾಲಕಿಯ ಕುಟುಂಬಸ್ಥರೊಂದಿಗೆ ಊಟ ಮುಗಿಸಿದ್ದಾನೆ. ನಂತರ ಬಾಲಕಿಯ ತಂದೆ, ಮನೆಯಲ್ಲಿ ಯಾವುದೋ ಕೆಲಸದಲ್ಲಿ ತೊಡಗಿದ್ದು, ತಾಯಿ ಹೊರಗೆ ಹೋಗಿದ್ದರು. ಈ ವೇಳೆ, ಮಗು ಮಾವನೊಂದಿಗೆ ಆಟವಾಡುತ್ತಿತ್ತು. ಸ್ವಲ್ಪ ಸಮಯದ ನಂತರ ಮಗು ಅಳುವುದು, ಕಿರುಚಾಡುವ ಶಬ್ದ ಕೇಳಿದ್ದು, ತಂದೆ ಒಳಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.