ಸಾಗರ್(ಮಧ್ಯಪ್ರದೇಶ):ಸಾಗರ್ ವಿಭಾಗೀಯ ಕೇಂದ್ರದಲ್ಲಿನ ವಾಚ್‌ಮನ್‌ಗಳ ಹತ್ಯೆ ಪ್ರಕರಣ ನಿಗೂಢವಾಗಿದೆ. ಕಳೆದ 72 ಗಂಟೆಗಳಲ್ಲಿ 3 ಮತ್ತು 4 ತಿಂಗಳೊಳಗೆ ಒಟ್ಟಾರೆ ನಾಲ್ವರು ವಾಚ್‌ಮನ್‌ಗಳ ಹತ್ಯೆ ಮಾಡಲಾಗಿದೆ. ಅಲ್ಲದೇ ಎಲ್ಲ ಕೊಲೆಗಳನ್ನು ಮಾಡಿರುವ ವಿಧಾನ ಬಹುತೇಕ ಒಂದೇ ರೀತಿ ಇದೆ. ಕೊಲೆಗಾರ ಮಧ್ಯರಾತ್ರಿಯಲ್ಲಿ ಕಾರ್ಯ ನಿರ್ವಹಿಸುವ ಕಾವಲುಗಾರರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದಾನೆ.
ವಾಚ್‌ಮನ್‌ಗಳ ತಲೆ ಮೇಲೆ ಕಲ್ಲು ಎತ್ತಾಕಿ ಹತ್ಯೆ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಚ್‌ಮನ್ ಹತ್ಯೆ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರ ಕಾರ್ಯವೈಖರಿ ಬಗ್ಗೆ ಇದೀಗ ಹಲವಾರು ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ, ನಿಗೂಢ ಹಂತಕನ ಯಾವುದೇ ಸುಳಿವು ಸಹ ಸಿಕ್ಕಿಲ್ಲ.
ಮೊದಲನೇ ಕೊಲೆ: ನಗರದ ಉಪನಗರವಾದ ಮಕ್ರೋನಿಯಾದ ಪೊಲೀಸ್ ಠಾಣೆ ವ್ಯಾಪ್ತಿಯ ಮಕ್ರೋನಿಯಾ ರೈಲ್ವೆ ಸೇತುವೆಯ ಕಾವಲುಗಾರ ಉತ್ತಮ್ ರಜಾಕ್ ಕೊಲೆ ಪ್ರಕರಣ ಮೇ. 2 ರಂದು ಬೆಳಕಿಗೆ ಬಂದಿತ್ತು. ಉತ್ತಮ್ ರಜಕ್ ಅವರ ತಲೆಯ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕೊಲೆ ನಡೆದು ನಾಲ್ಕು ತಿಂಗಳು ಕಳೆದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಎರಡನೇ ಕೊಲೆ: ಆಗಸ್ಟ್ 28 ರಂದು ನಗರದ ಕೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಭೈಂಸಾ ಗ್ರಾಮದ ಕಾರ್ಖಾನೆಯೊಂದರ ಕಾವಲುಗಾರ ಕಲ್ಯಾಣ್ ಲೋಧಿ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಇದುವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಮೂರನೇ ಕೊಲೆ: ಆಗಸ್ಟ್ 29 ರ ಸೋಮವಾರ ರಾತ್ರಿ, ನಗರದ ಮೋತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಟೌನಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಕಾವಲು ಕಾಯುತ್ತಿದ್ದ ಸಾಗರದ ಸಂತ ರವಿ ನಗರ ವಾರ್ಡ್‌ನ ನಿವಾಸಿ ಮೋತಿಲಾಲ್ ಅಹಿರ್ವಾರ್ ಅವರನ್ನು ಅದೇ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಚಿಕಿತ್ಸೆ ವೇಳೆ ಬುಧವಾರ ರಾತ್ರಿ ಭೋಪಾಲ್‌ನಲ್ಲಿ ಮೃತಪಟ್ಟಿದ್ದಾರೆ.