ಲಖನೌ:ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ 3 ಕೆಜಿ ಚಿನ್ನದೊಂದಿಗೆ ನಾಲ್ಕು ಜನರನ್ನು ಸೆರೆ ಹಿಡಿಯಲಾಗಿದೆ.
ಒಳ ಉಡುಪಿನಲ್ಲಿಟ್ಟುಕೊಂಡಿದ್ದ 1.49 ಕೋಟಿ ಮೌಲ್ಯದ 3 ಕೆಜಿ ಚಿನ್ನ ವಶ! - ಒಳ ಉಡುಪಿನಲ್ಲಿಟ್ಟುಕೊಂಡು ಬಂದಿದ್ದ 1.49 ಕೋಟಿಯ ಮೂರು ಕೆಜಿ ಚಿನ್ನ ವಶ,
ದುಬೈದಿಂದ ಬಂದ ನಾಲ್ವರಿಂದ ಮೂರು ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ನಾಲ್ವರು ಲಖನೌ ಏರ್ಪೋರ್ಟ್ಗೆ ಬಂದಿಳಿದ್ದರು. ತಪಾಸಣೆ ವೇಳೆ ಕಸ್ಟಮ್ಸ್ ಇಲಾಖೆ ಸುಮಾರು 3 ಕೆಜಿ ಚಿನ್ನವನ್ನು ಅವರಿಂದ ವಶಪಡಿಸಿಕೊಂಡಿದೆ. ಕಳ್ಳಸಾಗಾಣಿಕೆದಾರರು ತಮ್ಮ ಒಳ ಉಡುಪುಗಳು ಮತ್ತು ಬೆಲ್ಟ್ನಲ್ಲಿ ಚಿನ್ನವನ್ನು ಅಡಗಿಸಿಟ್ಟಿರುವುದು ತಪಾಸಣೆ ವೇಳೆ ತಿಳಿದು ಬಂದಿದೆ.
ದುಬೈನಿಂದ ನಾಲ್ವರು ದುಬೈ ವಿಮಾನ (ಎಫ್ Z ಡ್ 8325), ಸ್ಪೈಸ್‌ಜೆಟ್ ವಿಮಾನ (ಎಸ್‌ಜಿ 138) ಮತ್ತು ಏರ್ ಇಂಡಿಯಾ ವಿಮಾನ (ಎಐ 1930) ಮೂಲಕ ಲಖನೌಗೆ ಬಂದರು. ಕಸ್ಟಮ್ಸ್ ಇಲಾಖೆಯ ತಪಾಸಣೆ ವೇಳೆ ನಾಲ್ಕು ಪ್ರಯಾಣಿಕರಿಂದ ಒಟ್ಟು 3 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 1 ಕೋಟಿ 49 ಲಕ್ಷ 10 ಸಾವಿರ ರೂಪಾಯಿ ಆಗಿದೆ.
TAGGED:
1.49 crore rupees gold