ರುದ್ರಪುರ( ಉತ್ತರಾಖಂಡ್):ಮದುವೆಯಾದ ನಂತರ ಮಗಳನ್ನು ಗಂಡನ ಮನೆಗೆ ಬಿಟ್ಟು ಸಂತೋಷದಿಂದ ಮನೆಗೆ ವಾಪಸಾಗುತ್ತಿದ್ದ ಕುಟುಂಬದಲ್ಲಿ ಈಗ ನೀರವ ಮೌನ ಆವರಿಸಿದೆ. ರಸ್ತೆ ಅಪಘಾತದಲ್ಲಿ ಮದುಮಗಳ ತಾಯಿ ಮತ್ತು ಅಜ್ಜಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರ ಬಳಿ ನಡೆದಿದೆ.
ಇಲ್ಲಿನ ಬಸಂತ್ ಗಾರ್ಡನ್ ಕಿಚಾ ನಿವಾಸಿ ಜಗದೀಶ್ ಅಗರ್ವಾಲ್ ಅವರ ಪುತ್ರಿ ಗದರ್‌ಪುರದಲ್ಲಿ ಸೋಮವಾರ ರಾತ್ರಿ ವಿವಾಹ ಮಾಡಿದ್ದರು. ಮಗಳನ್ನು ಗದರ್‌ಪುರದಲ್ಲಿ ಬಿಟ್ಟು ಕುಟುಂಬ ಮಂಗಳವಾರ ಬೆಳಗ್ಗೆ ಮನೆಗೆ ಮರಳುತ್ತಿತ್ತು. ಎಫ್‌ಸಿಐನಲ್ಲಿ ಕೆಲಸ ಮಾಡುತ್ತಿರುವ ಚರಣ್ ಸಿಂಗ್ ಇಂಟರ್ಯಾಕ್ ರ್ಯಾಕ್ ಕಾರ್ಖಾನೆಯ ಮುಂದೆ ಬೆಳಗ್ಗೆ ವಾಕ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರಿಗೆ ಎದುರಾಗಿದ್ದಾರೆ. ಆ ವ್ಯಕ್ತಿಯನ್ನು ಉಳಿಸುವ ಭರದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.