ರಾಜಸ್ಥಾನ/ಪಾಲಿ:ಕಾರಿನ ಮೇಲೆ ಟ್ರಕ್ ಹತ್ತಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಗುಡಾ ಎಂಡ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಾರಿನ ಮೇಲೆ ಹತ್ತಿದ ಟ್ರಕ್: ಸ್ಥಳದಲ್ಲೇ ನಾಲ್ವರು ಅಪ್ಪಚ್ಚಿ - pali accident
ಕಾರಿನ ಮೇಲೆ ಟ್ರಕ್ ಹತ್ತಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜಸ್ಥಾನದ ಪಾಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸ್ಥಳದಲ್ಲೇ ನಾಲ್ವರು ಅಪ್ಪಚ್ಚಿ
ಪಾಲಿಯಿಂದ ಸಿರೋಹಿ ಕಡೆಗೆ ಒಂದು ಕಾರು ಹೋಗುತ್ತಿತ್ತು , ಈ ವೇಳೆ ಅಮೃತಶಿಲೆ ತುಂಬಿದ ಟ್ರಕ್ ಕಾರನ್ನು ಓವರ್ ಟೇಕ್ ಮಾಡಲು ಹೋಗಿ ಕಾರಿನ ಮೇಲೆ ಬಿದ್ದಿದೆ. ಇದರಿಂದಾಗಿ ಜಲೂರು ನಿವಾಸಿ ಮನೋರ್ ಶರ್ಮಾ, ಜೋಧ್ಪುರದ ಅಶ್ವಿನಿ ಕುಮಾರ್ ಡೇವ್, ಜೋಧಪುರದ ನಿವಾಸಿ ಬುದ್ಧ ರಾಮ್ ಪ್ರಜಾಪತ್ ಮತ್ತು ರಶ್ಮಿ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ಪಾಲಿಯ ಖಜಾನೆ ಅಧಿಕಾರಿ ಮನೋಜ್ ಶರ್ಮಾ ಎಂಬುವರು ಸೇರಿದ್ದಾರೆ.