ನವದೆಹಲಿ :ಇನ್ನೂ 4 ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೊನಾ ವೈರಸ್ ವಿರೋಧಿ ಲಸಿಕೆ ಉತ್ಪಾದನೆಯನ್ನು ಅಕ್ಟೋಬರ್-ನವೆಂಬರ್ ವೇಳೆಗೆ ಆರಂಭಿಸುವ ನಿರೀಕ್ಷೆಯಿದೆ. ಇದು ಚುಚ್ಚುಮದ್ದು ಚುರುಕುಗೊಳಿಸುವಿಕೆಯ ವೇಗ ಹೆಚ್ಚಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಸತ್ತಿಗೆ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಭಾರತವು ಈವರೆಗೆ 47 ಕೋಟಿ ಡೋಸ್ ಲಸಿಕೆ ನೀಡಿದೆ. ಇಡೀ ದೇಶದಲ್ಲಿ ಅತಿ ಬೇಗನೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. 7ರಿಂದ 9 ಪ್ರತಿಶತದಷ್ಟು ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳು ಬಳಸದೇ ಉಳಿದಿರುವುದನ್ನ ಸರ್ಕಾರಿ ಲಸಿಕೆ ಕೇಂದ್ರಗಳು ಬಳಸುತ್ತಿವೆ ಎಂದರು.
ಮಾಂಡವೀಯಾ ಅವರು ಪೆಗಾಸಸ್ ಸಮಸ್ಯೆ ಮತ್ತು ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯ ಬಗ್ಗೆ ಸದನದಲ್ಲಿ ಗದ್ದಲದ ನಡುವೆ ಮಾತನಾಡಿದರು. ಲಸಿಕೆ ನೀಡುವ ಅಭಿಯಾನ ಸುಗಮವಾಗಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ನಾಲ್ಕು ಭಾರತೀಯ ಕಂಪನಿಗಳು ಉತ್ಪಾದನೆ ಹೆಚ್ಚಿಸುವುದರೊಂದಿಗೆ ಇನ್ನಷ್ಟು ವೇಗ ಪಡೆಯಲಿದೆ.