ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು - Nanded Hyderabad Highway Road Accident

ನಾಂದೇಡ್ - ಹೈದರಾಬಾದ್ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತ

By

Published : Jun 4, 2022, 9:48 AM IST

ನಾಂದೇಡ್: ನಾಂದೇಡ್ - ಹೈದರಾಬಾದ್ ಹೆದ್ದಾರಿಯ ನೈಗಾಂವ್ ತಾಲೂಕಿನ ಕುಂಚೇಲಿ ಫಟಾ ಎಂಬಲ್ಲಿ ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ಶಂಕರರಾವ್ ಜಾಧವ್, ಮಹಾನಂದ ಜಾಧವ್, ಧನರಾಜ್ ಜಾಧವ್ ಮತ್ತು ಕಲ್ಪನಾ ಶಿಂಧೆ ಅಪಘಾತದಲ್ಲಿ ಮೃತ ಪಟ್ಟ ಒಂದೇ ಕುಟುಂಬದ ಸದಸ್ಯರು. ಸ್ವಾತಿ ಪಾಟೀಲ್ ತೀವ್ರವಾಗಿ ಗಾಯಗೊಂಡಿದ್ದು, ನಾಂದೇಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ರಾತ್ರಿ ನೈಗಾಂವ್ ತಾಲೂಕಿನ ಟಕ್ಲಿಯಿಂದ ಕೆರೂರಿಗೆ ಐವರು ಕಾರಿನಲ್ಲಿ ತೆರಳುತ್ತಿದ್ದರು. ಆ ವೇಳೆ, ದೇಗಳೂರಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಘಟನೆ ನಡೆದ ವೇಳೆ ಭಾರಿ ಜನ ಜಮಾಯಿಸಿದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಇದನ್ನೂ ಓದಿ:ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ: ಹೊತ್ತಿ ಉರಿದ ಬಸ್​,7 ಜನ ಸಜೀವ ದಹನ‌; ಮೋದಿ ಸಂತಾಪ

ABOUT THE AUTHOR

...view details