ಕರ್ನಾಟಕ

karnataka

ETV Bharat / bharat

30ಕ್ಕೂ ಹೆಚ್ಚು ಕಲಾವಿದರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ​: ಬಾಲಕ ಸೇರಿ ನಾಲ್ವರು ಸಾವು - ಮಯೂರ್​ಭಂಜ್​ ಅಪಘಾತ,

30 ಜನ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್​ವೊಂದು ನಿಯಂತ್ರಣ ತಪ್ಪಿ 15 ಅಡಿಗಳ ಆಳಕ್ಕೆ ಉರುಳಿಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಒಡಿಶಾದ ಮಯೂರ್​ಭಂಜ್​ ಜಿಲ್ಲೆಯಲ್ಲಿ ನಡೆದಿದೆ.

4 Killed and 25 Injured, 4 Killed and 25 Injured As Tractor Overturns, 4 Killed and 25 Injured As Tractor Overturns In Mayurbhanj, Mayurbhanj accident, Mayurbhanj accident news, ನಾಲ್ವರು ಸಾವು ಮತ್ತು 25 ಜನರಿಗೆ ಗಾಯ, ಟ್ರ್ಯಾಕ್ಟರ್​ ಪಲ್ಟಿಯಾಗಿ ನಾಲ್ವರು ಸಾವು ಮತ್ತು 25 ಜನರಿಗೆ ಗಾಯ, ಮಯೂರ್​ಭಂಜ್​ನಲ್ಲಿ ಟ್ರ್ಯಾಕ್ಟರ್​ ಪಲ್ಟಿಯಾಗಿ ನಾಲ್ವರು ಸಾವು ಮತ್ತು 25 ಜನರಿಗೆ ಗಾಯ, ಮಯೂರ್​ಭಂಜ್​ ಅಪಘಾತ, ಮಯೂರ್​ಭಂಜ್​ ಅಪಘಾತ ಸುದ್ದಿ,
15 ಅಡಿಗಳ ಆಳಕ್ಕೆ ಉರುಳಿ ಬಿದ್ದ 30 ಜನ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್​

By

Published : Feb 18, 2021, 7:41 AM IST

ಮಯೂರ್‌ಭಂಜ್: ಟ್ರ್ಯಾಕ್ಟರ್​ವೊಂದು 15 ಅಡಿಗಳ ಆಳಕ್ಕೆ ಉರುಳಿಬಿದ್ದ ಪರಿಣಾಮ ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಪೋಖರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮುರುನಿಯಾ ಗ್ರಾಮದ ಬಳಿ ಸಂಭವಿಸಿದೆ.

15 ಅಡಿಗಳ ಆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್, ನಾಲ್ವರು ಸಾವು ​

ಮೂಲಗಳ ಪ್ರಕಾರ, ಒಡಿಶಾ-ಜಾರ್ಖಂಡ್ ಗಡಿಯಲ್ಲಿರುವ ದಮಾನಿಸಾಹಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ 30ಕ್ಕೂ ಹೆಚ್ಚು ಕಲಾವಿದರು ಟ್ರ್ಯಾಕ್ಟರ್​ ಮೂಲಕ ಬಾಗ್ಬುಡಾ ಗ್ರಾಮಕ್ಕೆ ಮರಳುತ್ತಿತ್ತು.

ನಡು ದಾರಿಯಲ್ಲಿ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ವಾಹನವು ರಸ್ತೆಯಿಂದ 15 ಅಡಿ ಕೆಳಗೆ ಬಿದ್ದು ಪಲ್ಟಿಯಾಗಿದೆ. ಪರಿಣಾಮ ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಮುಂದುವರಿಸಿದರು.

ಘಟನೆಯಲ್ಲಿ 25ಕ್ಕೂ ಹೆಚ್ಚು ಕಲಾವಿದರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕುರಿತು ಜಾರ್ಪೋಖರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details