ಚಂಡೀಗಢ (ಹರಿಯಾಣ): ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ ಮತ್ತು ಸುಲಿಗೆ ಕೆರೆಗಳು ಬಂದಿವೆ. ಜೂನ್ 24ರಿಂದ 28 ರವರೆಗೆ ಈ ಬೆದರಿಕೆ ಕರೆಗಳು ಬಂದಿವೆ. ಇವುಗಳನ್ನು ಪತ್ತೆಹಚ್ಚುವ ಕಾರ್ಯದ ವೇಳೆ ಮಧ್ಯಪ್ರಾಚ್ಯದ ದೇಶಗಳ ವಿವಿಧ ದೂರವಾಣಿ ಸಂಖ್ಯೆಗಳಿಂದ ಬಂದಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಸಕರಿಗೆ ಬಂದ ದೂರವಾಣಿ ಸಂಖ್ಯೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೋಂದಾಯಿಸಲಾಗಿದೆ ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಮೊಬೈಲ್‌ಗಳ ತಾಂತ್ರಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ಬೆದರಿಕೆ ಕೆರೆಗಳ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ಮಾಡಲಾಗಿದೆ.
ಇದೇ ಸಂಖ್ಯೆಗಳಿಂದ ಪಂಜಾಬ್‌ನ ಕೆಲವು ಮಾಜಿ ಶಾಸಕರಿಗೂ ಬೆದರಿಕೆ ಕೆರೆಗಳು ಬಂದಿವೆ. ಶಾಸಕರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಮುಂಬೈಕರ್ ಮತ್ತು ಪಂಜಾಬಿ ಭಾಷೆಯಂತಹ ವಿಭಿನ್ನ ಸ್ವರಗಳು ಮತ್ತು ಸಂಭಾಷಣೆಯ ಶೈಲಿಗಳನ್ನು ಬಳಸಲಾಗಿದೆಯಂತೆ.