ಅಂಬಿಕಾಪುರ: ಇಂದು ಬೆಳ್ಳಂಬೆಳಗ್ಗೆ ಛತ್ತೀಸ್‌ಗಢದಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆ 4.8 ಆಗಿದ್ದು, ಭೂಮಿಯಿಂದ 10 ಕಿಮೀ ಆಳದಲ್ಲಿದೆ ಭೂಕಂಪದ ಕೇಂದ್ರಬಿಂದು ಇದೆ ಎಂದು ಹೇಳಲಾಗುತ್ತಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಛತ್ತೀಸ್‌ಗಢದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 5.28 ಕ್ಕೆ 4.8 ತೀವ್ರತೆಯ ಕಂಪನಗಳು ಸಂಭವಿಸಿವೆ. ಇದರ ಕೇಂದ್ರವನ್ನು ಅಂಬಿಕಾಪುರದಿಂದ 65 ಕಿ.ಮೀ., ನೆಲದಿಂದ 10 ಕಿಮೀ ಆಳದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಕಳೆದ 1 ತಿಂಗಳಲ್ಲಿ 35 ಬಾರಿ ಭೂಕಂಪ: ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ಭಾರತದಲ್ಲಿ 35 ಭೂಕಂಪಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 7, ಲಡಾಖ್‌ನಲ್ಲಿ 4, ಅರುಣಾಚಲ ಪ್ರದೇಶದಲ್ಲಿ 2, ಅಸ್ಸಾಂನಲ್ಲಿ 3, ಗುಜರಾತ್‌ನಲ್ಲಿ 2, ಹಿಮಾಚಲ ಪ್ರದೇಶದಲ್ಲಿ 2, ಜಮ್ಮು ಮತ್ತು ಕಾಶ್ಮೀರದಲ್ಲಿ 3, ಮಣಿಪುರದಲ್ಲಿ 3, ಮೇಘಾಲಯದಲ್ಲಿ 1, ಪಂಜಾಬ್‌ನಲ್ಲಿ 1, ರಾಜಸ್ಥಾನದಲ್ಲಿ 1, ಉತ್ತರಾಖಂಡದಲ್ಲಿ 1 ಮತ್ತು ಅಂಡಮಾನ್ನಲ್ಲಿ 3 ಬಾರಿ ಭೂಕಂಪನದ ಅನುಭವವಾಗಿದೆ.
ಓದಿ:ವಿಜಯಪುರದಲ್ಲಿ ಭೂಕಂಪನ.. ಸಾರ್ವಜನಿಕರಲ್ಲಿ ಹೆಚ್ಚಿದ ಭೀತಿ