ಕರ್ನಾಟಕ

karnataka

ETV Bharat / bharat

ಬೊಲೆರೊಗೆ ಟ್ರಕ್ ಡಿಕ್ಕಿ: ನಾಲ್ವರ ದುರ್ಮರಣ, 7 ಮಂದಿಗೆ ಗಾಯ - odisha road accident

ಮೂಲಗಳ ಪ್ರಕಾರ, ಕಾಳಹಂಡಿ ಜಿಲ್ಲೆಯ ಟಿಟ್ಕೆಲಾ ಗ್ರಾಮದ ಕುಟುಂಬವೊಂದು ಮದುವೆಯ ಔತಣದಲ್ಲಿ ಪಾಲ್ಗೊಂಡು ಬೊಲೆರೋದಲ್ಲಿ ಹಿಂತಿರುಗುತ್ತಿದ್ದ ವೇಳೆ ತುರ್ಲಖ್ಮಾನ್ ಬಳಿ ಎದುರಿನಿಂದ ಬರುತ್ತಿದ್ದ ಅಕ್ಕಿ ತುಂಬಿದ್ದ ಟ್ರಕ್‌ ಗುದ್ದಿದೆ..

ಬೊಲೆರೊಗೆ ಟ್ರಕ್ ಡಿಕ್ಕಿ
ಬೊಲೆರೊಗೆ ಟ್ರಕ್ ಡಿಕ್ಕಿ

By

Published : Feb 22, 2022, 12:01 PM IST

ಭವಾನಿಪಟ್ಟಣ(ಒಡಿಶಾ) :ಬೊಲೆರೊ ಹಾಗೂ ಟ್ರಕ್ ಡಿಕ್ಕಿಯಾದ ಪರಿಣಾಮ ಮೂವರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಒಡಿಶಾದ ಕಾಳಹಂಡಿ ಜಿಲ್ಲೆಯ ಭವಾನಿಪಟ್ಟಣದ ತುರ್ಲಖ್ಮಾನ್ ಬಳಿ ನಡೆದಿದೆ.

ಘಟನೆಯಲ್ಲಿ ಇನ್ನೂ 7 ಮಂದಿ ಗಾಯಗೊಂಡಿದ್ದಾರೆ. ಅವರುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 10 ಜನರ ದುರ್ಮರಣ

ಮೂಲಗಳ ಪ್ರಕಾರ, ಕಾಳಹಂಡಿ ಜಿಲ್ಲೆಯ ಟಿಟ್ಕೆಲಾ ಗ್ರಾಮದ ಕುಟುಂಬವೊಂದು ಮದುವೆಯ ಔತಣದಲ್ಲಿ ಪಾಲ್ಗೊಂಡು ಬೊಲೆರೋದಲ್ಲಿ ಹಿಂತಿರುಗುತ್ತಿದ್ದ ವೇಳೆ ತುರ್ಲಖ್ಮಾನ್ ಬಳಿ ಎದುರಿನಿಂದ ಬರುತ್ತಿದ್ದ ಅಕ್ಕಿ ತುಂಬಿದ್ದ ಟ್ರಕ್‌ ಗುದ್ದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details