ಔರಂಗಾಬಾದ್ : ಔರಂಗಾಬಾದ್ - ಲಾಸೂರ್ ರಸ್ತೆಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವೈಜಾಪುರದಲ್ಲಿ ನಡೆದಿದೆ.
ನಾಲ್ವರು ಸಾವು, 22 ಜನರಿಗೆ ಗಾಯ ಪೊಲೀಸರ ಪ್ರಕಾರ, ಮದುವೆ ಹಿನ್ನೆಲೆ ಟ್ರಕ್ನಲ್ಲಿ ಜನರು ಔರಂಗಾಬಾದ್‌ನಿಂದ ನಾಸಿಕ್‌ಗೆ ತೆರಳುತ್ತಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎರಡು ಟ್ರಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮದುವೆ ತೆರಳುತ್ತಿದ್ದ ಟ್ರಕ್ ಮತ್ತು ಎದುರಿಗೆ ಬಂದ ಟ್ರಕ್ ನಡುವೆ ಭೀಕರವಾಗಿ ಮುಖಾಮುಖಿ ಡಿಕ್ಕಿಹೊಡೆದಿವೆ.
ಓದಿ:ಕೇಂದ್ರ ಬಜೆಟ್ 2022 : ರಾಜ್ಯದ ರೈತರ ನಿರೀಕ್ಷೆಗಳೇನು?
ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆ ಸ್ಥಳದಲ್ಲೇ ನಾಲ್ವರು ಸಾವನಪ್ಪಿದ್ದು, 22 ಜನರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯಕೈಗೊಂಡಿದ್ದರು.
ನಾಲ್ವರು ಸಾವು, 22 ಜನರಿಗೆ ಗಾಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರೊಡನೆ ರಕ್ಷಣಾ ಕಾರ್ಯ ಮುಂದುವರೆಸಿದರು. ಬಳಿಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕತ್ಸೆಗಾಗಿ ಆ ಗಾಯಾಳುಗಳನ್ನು ಔರಂಗಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಚಿಕಿತ್ಸೆಗಾಗಿ ನಾಸಿಕ್‌ಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ