ರಾಂಚಿ(ಜಾರ್ಖಂಡ್): ಛತ್ ಪೂಜೆ ಅಂಗವಾಗಿ ತಮ್ಮ ಪೋಷಕರ ಜೊತೆಗೆ ನದಿಯ ಬಳಿ ತೆರಳಿದ್ದ 10 ವರ್ಷದೊಳಗಿನ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ರಾಜ್ಯದ ಗಿರಿಡಿಹ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗ್ರೋಡಿಹ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ನದಿಯಲ್ಲಿ ಸ್ನಾನ ಮಾಡಲು ಹಾಗೂ ಪ್ರಸಾದ ತಯಾರಿಕೆಗಾಗಿ ನೀರನ್ನು ತರುವ ಸಲುವಾಗಿ ತೆರಳಿದ್ದರು. ಅವರ ಜೊತೆಗೆ ತೆರಳಿದ್ದ ನಾಲ್ವರು ಮಕ್ಕಳು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಎಎಸ್ಐ ರತಿನಾಥ್ ಮುಂಡಾ ಮಾಹಿತಿ ನೀಡಿದ್ದಾರೆ.