ಕರ್ನಾಟಕ

karnataka

ETV Bharat / bharat

ಬಾಹುಬಲಿ ಕೋಣಕ್ಕೆ ಮೂರು ಕೆಜಿ ಚಿನ್ನದ ಸರ ಗಿಫ್ಟ್

ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಕೆಲವೊಂದು ಕೋಣಗಳಿಂದ ಸ್ಪಂಟ್​ಗಳನ್ನೂ ಮಾಡಿಸಲಾಗುತ್ತದೆ.

3kgs-gold-chain-gift-to-the-bahubali-dunna-for-sadar-celebrtaions
ಬಾಹುಬಲಿ ಕೋಣಕ್ಕೆ ಮೂರು ಕೆಜಿ ಚಿನ್ನದ ಸರ ಗಿಫ್ಟ್

By

Published : Nov 5, 2021, 9:54 PM IST

ಹೈದರಾಬಾದ್(ತೆಲಂಗಾಣ):ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಉತ್ಸವವಾದ ಸದರ್ ಉತ್ಸವಕ್ಕೆ ಹೈದರಾಬಾದ್ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಕೋಣ ಸಾಕಷ್ಟು ಗಮನ ಸೆಳೆಯುತ್ತಿದೆ.

ಹೌದು, ಹೈದರಾಬಾದ್​ನಲ್ಲಿ ನಡೆಯುವ ಸದರ್ ಉತ್ಸವದಲ್ಲಿ ಕೋಣಗಳನ್ನು ಪ್ರದರ್ಶಿಸಲಾಗುತ್ತದೆ. ಕಟ್ಟುಮಸ್ತಾಗಿ ಬೆಳೆದ ಕೋಣಗಳನ್ನು ಇದೇ ಕಾರಣಕ್ಕಾಗಿ ಬೇರೆ ಬೇರೆಡೆಯಿಂದ ತರಿಸಲಾಗುತ್ತದೆ. ಕೆಲವೊಮ್ಮೆ ಇಲ್ಲೇ ಸ್ಥಳೀಯವಾಗಿ ಬೆಳೆದ ಕೋಣಗಳನ್ನೂ ಕೂಡಾ ಪ್ರದರ್ಶಿಸಲಾಗುತ್ತದೆ.

ಬಾಹುಬಲಿ ಕೋಣ

ಈಗ ಹರಿಯಾಣದಿಂದ ಒಂದು ಕೋಣವನ್ನು ತರಿಸಲಾಗಿದ್ದು, ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್​ನ ಚಾಪೆಲ್ ಬಜಾರ್​ನ ಲಡ್ಡು ಯಾದವ್ ಎಂಬಾತ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬಾತನಿಂದ ತಂದು, ಸದರ್ ಉತ್ಸವದಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ.

ಈ ಕೋಣವನ್ನು ಪ್ರದರ್ಶನಕ್ಕಾಗಿ ಮಾತ್ರ ತಂದಿದ್ದು, ಇದಕ್ಕೆ ಕೋಣದ ಮಾಲೀಕ ಬಲ್ವೀರ್ ಸಿಂಗ್ ಯಾವುದೇ ಹಣವನ್ನೂ ಪಡೆದಿಲ್ಲ. ಆದರೆ ಕೋಣ ತಂಡ ಲಡ್ಡು ಯಾದವ್ ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಿದ್ದಾನೆ.

ಇನ್ನು ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಕೆಲವೊಂದು ಕೋಣಗಳಿಂದ ಸ್ಪಂಟ್​ಗಳನ್ನೂ ಮಾಡಿಸಲಾಗುತ್ತದೆ.

ಇದನ್ನೂ ಓದಿ:ಪತ್ನಿಯನ್ನು ಮೇಕಪ್‌ರಹಿತವಾಗಿ ನೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ!

ABOUT THE AUTHOR

...view details