ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ) ದಿಂದ ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ನಡೆಸಲಾಗುವುದು. ಗ್ರೂಪ್ ಸಿ ಹುದ್ದೆಗಳು ಇವಾಗಿದ್ದು, ಒಟ್ಟು 384 ಹುದ್ದೆಗಳ ಭರ್ತಿ ನಡೆಸಲಾಗುವುದು. ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಎಸ್ಎಸ್ಸಿಯಿಂದ ಒಟ್ಟು 384 ಹುದ್ದೆಗಳ ನೇಮಕಾತಿಯನ್ನು ಈ ಕೆಳಗಿನ ಇಲಾಖೆಗೆ ನಡೆಸಲಾಗುವುದು
ಸೆಂಟ್ರಲ್ ಸೆಕ್ರೆಟರಿಯಟ್ ಸ್ಟೆನೋಗ್ರಾಫರ್ ಸರ್ವೀಸ್ -342
ರೈಲ್ವೆ ಬೋರ್ಡ್ ಸೆಕ್ರೆಟರಿಯಟ್ ಸ್ಟೆನೋಗ್ರಾಫರ್ಸ್ ಸರ್ವೀಸ್ 17
ಸೇನಾ ಬಲ ಹೆಡ್ಕ್ವಾರ್ಟಸ್ ಸ್ಟೆನೋಗ್ರಾಫರ್ಸ್ ಸರ್ವೀಸ್- 19
ಭಾರತ ಚುನಾವಣಾ ಆಯೋಗ ಸ್ಟೆನೋಗ್ರಾಫರ್ಸ್ ಸರ್ವೀಸ್- 2
ಭಾರತೀಯ ವಿದೇಶ ಸೇವಾ ಬ್ರಾಂಚ್ (ಬಿ) ಸ್ಟೆನೋಗ್ರಾಫರ್ಸ್- 4
ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ಮಂಡಳಿ ಅಥವಾ ಸಂಸ್ಥೆಯಿಂದ 12ನೇ ತರಗತಿ ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 50 ವರ್ಷ ಮೀರಿರಬಾರದು.
ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಒನ್ ಟೈಮ್ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಳಿಕ, ಅಭ್ಯರ್ಥಿಗಳು ಶೈಕ್ಷಣಿಕ ಮಾಹಿತಿ ಸೇರಿದಂತೆ ಇನ್ನಿತರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಈ ಮಾಹಿತಿ ಸೇರಿದಂತೆ ಅಗತ್ಯ ದಾಖಲಾತಿಗಳ ಈ ಹಾರ್ಡ್ ಕಾಪಿಗಳನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ ಪ್ರಾದೇಶಿಕ ನಿರ್ದೇಶಕರು, ಸಿಬ್ಬಂದಿ ನೇಮಕಾತಿ ಆಯೋಗ, ಬ್ಲಾಕ್ ನಂಬ 12, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ- 110003
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಸೆಪ್ಟೆಂಬರ್ 4ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 9 ಆಗಿದೆ. ಈ ಹುದ್ದೆಗೆ 2024ರ ಫೆಬ್ರವರಿ- ಮಾರ್ಚ್ನಲ್ಲಿ ತಾತ್ಕಾಲಿಕ ಪರೀಕ್ಷೆ ನಡೆಯಲಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು https://ssc.nic.in. ಈ ಜಾಲತಾಣಕ್ಕೆ ಭೇಟಿ ನೀಡಿ.
ಇದನ್ನೂ ಓದಿ:KSET Exam: ಕೆ ಸೆಟ್ ಪರೀಕ್ಷೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ