ನವದಹೆಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ನಾಗಾಲೋಟ ಮುಂದುವರಿದಿದೆ. ಹಲವು ಸೋಂಕಿತರು ಸಕಾಲದಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಗಳು ಕೂಡ ಆಕ್ಸಿಜನ್, ಔಷಧ ಪೂರೈಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ರೈಲ್ವೆ ಇಲಾಖೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಕೈ ಜೋಡಿಸಿದೆ.
ರಾಜ್ಯ ಸರ್ಕಾರಗಳ ಬೇಡಿಕೆಗೆ ಅನುಗುಣವಾಗಿ 3,816 ರೈಲ್ವೆ ಕೋಚ್‌ಗಳನ್ನು ಕೋವಿಡ್ ಕೇರ್ ಕೋಚ್‌ಗಳಾಗಿ ಮಾರ್ಪಡಿಸಲಾಗಿದ್ದು, ಇವು ಜನರ ಸೇವೆಗೆ ಲಭ್ಯ ಇವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಇಂತಹ 21 ಕೋಚ್‌ಗಳನ್ನು ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಈ ಕೋಚ್‌ಗಳಲ್ಲಿ ಈಗಾಗಲೇ 47 ಮಂದಿ ರೋಗಿಗಳು ದಾಖಲಾಗಿದ್ದಾರೆ. ಶಾಕೂರ್ ಬಸ್ತಿಯಲ್ಲಿ 25, ಆನಂದ್ ವಿಹಾರ್, ಬದೋಹಿ ಹಾಗೂ ಫೈಜಾಬಾದ್‌ನಲ್ಲಿ ತಲಾ 10 ಬೋಗಿಗಳನ್ನು ನಿಯೋಜಿಸಿರುವುದಾಗಿ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.