ಸುಕ್ಮಾ(ಛತ್ತೀಸ್‌ಗಢ):ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಿಬಿರದ 38 ಯೋಧರಿಗೆ ಕೊರೊನಾ ತಗುಲಿದೆ.
ಸುಕ್ಮಾ ಜಿಲ್ಲೆಯ ಚಿಂತಾ ಗುಫಾ ಪ್ರದೇಶದ ತೆಮೆಲ್ವಾಡಾ ಶಿಬಿರದಲ್ಲಿನ 75 ಯೋಧರಿಗೆ ಸೋಮವಾರ ಆರೋಗ್ಯ ಇಲಾಖೆಯಿಂದ ಕೊರೊನಾ ಟೆಸ್ಟ್ ಮಾಡಿಸಲಾಯಿತು. ಈ ಪೈಕಿ 38 ಮಂದಿ ಯೋಧರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.