ಕರ್ನಾಟಕ

karnataka

ETV Bharat / bharat

ವಾರದಲ್ಲಿ ಅಪೌಷ್ಟಿಕತೆಗೆ 5 ಮಕ್ಕಳು ಸಾವು: ಮಾನ್​ನ್ಯೂಟ್ರಿಷಿಯನ್​​​ನಿಂದ ಬಳಲುತ್ತಿರುವ 3,667 ಮಕ್ಕಳು - ಕಛ್​ ಜಿಲ್ಲೆಯಲ್ಲಿ ನ್ಯೂಟ್ರಿಷನ್​ ಕೊರತೆ

ಕಳೆದ ವಾರ ಕಛ್​ನ ಲುದ್‌ಬಾಯಿ ಗ್ರಾಮದಲ್ಲಿ ಅಪೌಷ್ಟಿಕತೆಯಿಂದ 15 ತಿಂಗಳೊಳಗಿನ 5 ಮಕ್ಕಳು ಸಾವನ್ನಪ್ಪಿದ್ದಾರೆ. ಕಛ್​​ ಜಿಲ್ಲೆಯಲ್ಲಿ ಒಟ್ಟಾರೆ 3667 ಮಕ್ಕಳು ನ್ಯೂಟ್ರಿಷನ್​ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ.

ಅಪೌಷ್ಟಿಕತೆಗೆ ಮಕ್ಕಳು ಸಾವು
ಅಪೌಷ್ಟಿಕತೆಗೆ ಮಕ್ಕಳು ಸಾವು

By

Published : Jul 25, 2023, 10:41 PM IST

ಕಛ್ ​(ಗುಜರಾತ್​) :ಅಪೌಷ್ಟಿಕತೆಯಿಂದ ಮಕ್ಕಳು, ಮಹಿಳೆಯರು ಬಳಲಬಾರದು ಎಂದು ಕೇಂದ್ರ ಸರ್ಕಾರ 2018 ರಿಂದ ಪೋಷಣ್ ಅಭಿಯಾನ ಕೈಗೊಂಡಿದೆ. ಪೌಷ್ಠಿಕಾಂಶಯುಕ್ತ ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ. ಇದರ ಮಧ್ಯೆಯೂ ಗುಜರಾತ್​​ನ ಕಛ್​ನಲ್ಲಿ 5 ಮಕ್ಕಳು ಅಪೌಷ್ಟಿಕತೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಇಡೀ ಜಿಲ್ಲೆಯಲ್ಲಿ 3667 ಮಕ್ಕಳು ನ್ಯೂಟ್ರಿಷನ್​ ಕೊರತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಜಿಲ್ಲೆಯ ಲುದ್ಬಾಯಿ ಗ್ರಾಮದಲ್ಲಿ ಅಪೌಷ್ಟಿಕತೆಯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಈಚೆಗೆ ಟ್ರಸ್ಟ್​ವೊಂದು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಇದರಲ್ಲಿ ಗ್ರಾಮದ 322 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಯಿತು. ಈ ಪೈಕಿ 39 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇದು ಆತಂಕಕ್ಕೆ ಕಾರಣವಾಗಿದ್ದು, ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಅಲ್ಲಿನ ಸರಪಂಚರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸರ್ಕಾರದಿಂದ ಆರೋಗ್ಯ ಕ್ಷೇತ್ರದ ವೃದ್ಧಿಗೆ ಹಲವು ಪ್ರಯತ್ನಗಳು ನಡೆಯುತ್ತಿವೆ. ಹೊರವಲಯದ ಪುಟ್ಟ ಹಳ್ಳಿಗೂ ಸೇವೆ ವಿಸ್ತರಿಸುವ ಪ್ರಯತ್ನ ನಡೆದಿದೆ. ತಾಯಿ ಕಾರ್ಡ್, ಆಯುಷ್ಮಾನ್ ಕಾರ್ಡ್ ಮುಂತಾದ ಯೋಜನೆಗಳ ಸೌಲಭ್ಯಗಳನ್ನು ಸಹ ನೀಡಲಾಗಿದೆ. ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಅಭಿಯಾನವನ್ನು ಸಹ ನಡೆಸಲಾಗುತ್ತಿದೆ.

ನಿಷ್ಕ್ರಿಯ ಆಡಳಿತ :ಒಂದೇ ಗ್ರಾಮದಲ್ಲಿ 5 ಮಕ್ಕಳು ಸಾವನ್ನಪ್ಪಿ, 39 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ವಿಪರ್ಯಾಸ ಎಂದರೆ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿಯೇ ಇಲ್ಲ. ಇಲ್ಲಿಗೆ ವೈದ್ಯರನ್ನು ನೇಮಿಸಿ ಸರ್ಕಾರ ಗಾಂಭೀರ್ಯ ತೋರಬೇಕು. ಇಲ್ಲಿನ ಜನರು ಚಿಕಿತ್ಸೆಗಾಗಿ 40 ಕಿಮೀ ದೂರದ ನಗರಕ್ಕೆ ತೆರಳಬೇಕಿದೆ. ಜನರಿಗೆ ಸಮರ್ಪಕ ಆರೋಗ್ಯ ಸೌಲಭ್ಯಗಳನ್ನು ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಕಛ್ ಜಿಲ್ಲಾ ಪಂಚಾಯತ್‌ ಇಎಂಒ ಜಿತೇಶ್ ಖೋರಾಸಿಯಾ, ಲುದ್ಬಾಯಿ ಗ್ರಾಮದ ಮಕ್ಕಳಲ್ಲಿ ಕಡಿಮೆ ತೂಕ, ನ್ಯುಮೋನಿಯಾ ಮತ್ತು ಅತಿಸಾರ ಕಾಣಿಸಿಕೊಂಡಿದೆ. ಇದರಿಂದಾಗಿ ಅವರು ನಿಧನರಾಗಿದ್ದಾರೆ. ಕಛ್​ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಅಪೌಷ್ಟಿಕ ಮಕ್ಕಳ ಚಿಕಿತ್ಸೆಗಾಗಿ ಪೋಷಕರು ಸಾಕಷ್ಟು ಗಮನ ಹರಿಸದೇ ಇರುವುದು ಮಕ್ಕಳ ದೀನ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಪೌಷ್ಟಿಕ ಮಕ್ಕಳನ್ನು ದಾಖಲಿಸುತ್ತಾರೆ. ಅಂತಹ ಅಪೌಷ್ಟಿಕ ಮಕ್ಕಳನ್ನು ಹತ್ತಿರದ CMTC ಅಂದರೆ ಮಕ್ಕಳ ನಿಗಾ ಮತ್ತು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಪ್ರತಿ ತಾಲೂಕು ಮಟ್ಟದಲ್ಲಿ ಒಂದು ಸಿಎಂಟಿಸಿ ಮತ್ತು ಜಿಲ್ಲಾ ಮಟ್ಟದಲ್ಲಿ ನವಜಾತ ಶಿಶುಗಳ ಆರೈಕೆಯ ಕೇಂದ್ರವೂ ಇದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ;ವಿಮಾನ ಟೇಕ್​ಆಫ್​ ಮಾಡಲು ನಿರಾಕರಿಸಿದ ಪೈಲಟ್​.. ತೊಂದರೆ ಅನುಭವಿಸಿದ ಬಿಜೆಪಿ ಸಂಸದರು ಸೇರಿ ನೂರಾರು ಪ್ರಯಾಣಿಕರು

ABOUT THE AUTHOR

...view details