ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ತೆಲುಗು ರಾಜ್ಯಗಳಲ್ಲಿ ಅಳಿಯನಿಗೆ ವಿಶೇಷ ಸ್ಥಾನಮಾನ ಹಾಗೂ ಗೌರವ ನೀಡಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾವಿ ಅಳಿಯನಿಗೆ ಆಂಧ್ರಪ್ರದೇಶದ ಕುಟುಂಬವೊಂದು ಬರೋಬ್ಬರಿ 365 ಬಗೆಯ ಖಾದ್ಯಗಳನ್ನು ತಯಾರಿಸಿ ಉಣಬಡಿಸಿ ಗಮನ ಸೆಳೆದಿದೆ.
ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಮಾಧವಿ ಮತ್ತು ವೆಂಕಟೇಶ್ವರ ರಾವ್ ಎಂಬ ದಂಪತಿಗೆ ಕುಂದವಿ ಎಂಬ ಪುತ್ರಿ ಇದ್ದಾಳೆ. ಆಕೆಗೆ ತನುಕು ಪಟ್ಟಣದ ತುಮ್ಮಲಪಲ್ಲಿ ಸಾಯಿಕೃಷ್ಣ ಎಂಬಾತನ ಜೊತೆ ನಿಶ್ಚಿತಾರ್ಥವಾಗಿದೆ. ಕುಂದವಿ ಅವರ ಅಜ್ಜಿ - ಅಜ್ಜ ತಮ್ಮ ಮನೆಗೆ ವಧು - ವರರನ್ನು ಆಹ್ವಾನಿಸಿದ್ದು, ಕುಂದವಿ ಪೋಷಕರೊಂದಿಗೆ ಸೇರಿ ವರ್ಷಕ್ಕೆ 365 ದಿನಗಳು ಇರುವಂತೆ 365 ತರಹದ ಅಡುಗೆ ಮಾಡಿ ತಿನ್ನಿಸಿದ್ದಾರೆ.