ಕರ್ನಾಟಕ

karnataka

By

Published : Aug 24, 2021, 12:50 PM IST

ETV Bharat / bharat

ದೇಶದಲ್ಲಿ 363 ಸಂಸದರು, ಶಾಸಕರ ವಿರುದ್ಧ ಕ್ರಿಮಿನಲ್‌ ಕೇಸ್‌; ಬಿಜೆಪಿಗೆ ಅಗ್ರ ಸ್ಥಾನ-ADR Report

ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಹೊಸದಾಗಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿನ 363 ಹಾಲಿ ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ಇವೆ. ಇವರಲ್ಲಿ 83 ಮಂದಿ ಆಡಳಿತದಲ್ಲಿರುವ ಬಿಜೆಪಿಯವರೇ ಆಗಿದ್ದಾರೆ ಎಂದು ಹೇಳಿದೆ.

363 incumbent MPs and MLAs have criminal charges, BJP tops list with 83: ADR Report
ದೇಶದಲ್ಲಿ 363 ಸಂಸದರು, ಶಾಸಕರ ವಿರುದ್ಧ ಕ್ರಿಮಿನಲ್‌ ಕೇಸ್‌; ಬಿಜೆಪಿಗೆ ಪ್ರಥಮ ಸ್ಥಾನ-ಎಡಿಆರ್‌ ವರದಿ

ನವದೆಹಲಿ: ದೇಶದಲ್ಲಿನ 363 ಹಾಲಿ ಶಾಸಕರು, ಸಂಸರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ಇವೆ. ಇವರಲ್ಲಿ 83 ಮಂದಿ ಆಡಳಿತದಲ್ಲಿರುವ ಬಿಜೆಪಿಯವೇ ಆಗಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ - ಎಡಿಆರ್‌(ADR) ವರದಿ ಬಿಡುಗಡೆ ಮಾಡಿದೆ.

ಈ ಜನಪ್ರತಿನಿಧಿಗಳ ವಿರುದ್ಧ ಆರ್‌ಪಿ ಕಾಯ್ದೆ 1951 ರ ಸೆಕ್ಷನ್ 8 (1) (2) & (3) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಎಡಿಆರ್‌ನ ವರದಿ ಪ್ರಕಾರ ಕಾಂಗ್ರೆಸ್‌ನ 47 ಹಾಗೂ ಟಿಎಂಸಿ 25 ಜನಪ್ರತಿನಿಧಿಗಳು ಕ್ರಿಮಿನಲ್‌ ಪ್ರಕರಣಗಳನ್ನು ಹೊಂದುವ ಮೂಲಕ ಬಿಜೆಪಿ ನಂತರ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

2019ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದಿರುವ 67 ಸಂಸದರು, 2020 ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 54 ಶಾಸಕರು ಹಾಗೂ 2021ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ 42 ಶಾಸಕರು ಆರ್‌ಪಿ ಕಾಯ್ದೆ-1951ರ ಸೆಕ್ಷನ್‌ 8 (1) (2) & ( 3) ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

ನಾಲ್ವರು ಕೇಂದ್ರ ಸಚಿವರಿಂದ ಕ್ರಿಮಿನಲ್‌ ಪ್ರಕರಣ ಘೋಷಣೆ

ಕೇಂದ್ರದ ನಾಲ್ವರು ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ವಿವಿಧ ರಾಜ್ಯಗಳ 35 ಸಚಿವರ ವಿರುದ್ಧ ಕ್ರಿಮಿನಲ್‌ ಆರೋಪಗಳು ಇವೆ. ಅಲ್ಲದೆ 24 ಸಂಸದರ ವಿರುದ್ಧ ಒಟ್ಟು 43 ಹಾಗೂ 111 ಶಾಸಕರ ವಿರುದ್ಧ ಒಟ್ಟು 315 ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿ ಉಲ್ಲೇಖಿಸಿದೆ.

ಆರ್‌ಪಿ ಕಾಯ್ದೆ-1951ರ ಸೆಕ್ಷನ್ 8 (1), (2) ಮತ್ತು (3) ಏನು ಹೇಳುತ್ತೆ?

ಪ್ರಜಾಪ್ರತಿನಿಧಿ ಕಾಯ್ದೆ-1951 ರ ಸೆಕ್ಷನ್ 8 ರ ಅಡಿಯಲ್ಲಿ ಆಯ್ಕೆಯಾದ ವ್ಯಕ್ತಿಗಳ ಅನರ್ಹತೆಗಳನ್ನು ವಿವರಿಸಲಾಗುತ್ತದೆ. ಲೋಕಸಭೆ, ರಾಜ್ಯಸಭೆ ಸದಸ್ಯರು ಹಾಗೂ ರಾಜ್ಯಗಳ ಶಾಸಕಾಂಗ ಸಭೆ ಅಥವಾ ವಿಧಾನ ಪರಿಷತ್ ಸದಸ್ಯರ ವಿರುದ್ಧದ ಕ್ರಿಮಿನಲ್‌ ಪ್ರಕಣಗಳನ್ನು ಉಪವಿಭಾಗಗಳಾದ (1), (2) ಮತ್ತು (3)ರ ಅಡಿಯಲ್ಲಿ ಉಲ್ಲೇಖಿಸಲಾಗಿದೆ. ಉಪ ವಿಭಾಗಗಳ ಅಡಿಯಲ್ಲಿ ಅಪರಾಧಕ್ಕೆ ಗುರಿಯಾದ ಜನಪ್ರತಿನಿಧಿಗಳು ಶಿಕ್ಷೆಗೆ ಅರ್ಹರಾಗುತ್ತಾರೆ. ಆರೋಪ ಸಾಬೀತಾದರೆ ಅವರ ಆಯ್ಕೆಯನ್ನು ರದ್ದು ಪಡಿಸುವ ಅಧಿಕಾರ ಈ ಕಾಯ್ದೆಯಲ್ಲಿದೆ.

ಸೆಕ್ಷನ್ 8 (1), (2) & (3) ಅಡಿಯಲ್ಲಿ ಪಟ್ಟಿ ಮಾಡಿರುವ ಅಪರಾಧಗಳು ಗಂಭೀರ ಸ್ವರೂಪದ್ದಾಗಿದೆ. ಕೊಲೆ, ಅತ್ಯಾಚಾರ, ದರೋಡೆ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು, ಲಂಚ, ಅನಗತ್ಯ ಪ್ರಭಾವ, ಧರ್ಮ, ಜನಾಂಗ, ಭಾಷೆ, ಹುಟ್ಟಿದ ಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವಿನ ವೈರತ್ವ ಐಪಿಸಿ ಸೆಕ್ಷನ್‌ 1860ರ ಅಡಿಯಲ್ಲಿ ಬರುತ್ತದೆ.

ABOUT THE AUTHOR

...view details