ತ್ರಿಶೂರ್: ಕೇರಳದ ಮಾಹೆಯಿಂದ ಹಾಲಿನ ವ್ಯಾನ್ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3,500 ಲೀಟರ್ ಮದ್ಯವನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಎನ್ಕ್ಲೇವ್ ಆಗಿರುವ ಮಾಹೆಯಿಂದ ಹೊರಗಡೆ ಮಾರಲು ನಿರ್ಬಂಧ ಇರುವ ಮದ್ಯವನ್ನು ಹಾಲಿನ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಮೂಲದ ಕೃಷ್ಣ ಪ್ರಕಾಶ (23) ಮತ್ತು ಕೊಲ್ಲಂ ನಿವಾಸಿ ಸಾಜಿ (51) ಇವರನ್ನು ಬಂಧಿಸಲಾಗಿದೆ. ಕೊಡಂಗಲ್ಲೂರ ಮತ್ತು ವದನಪಲ್ಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ಸಾಗಾಟ ತಡೆದಿದ್ದಾರೆ.