ಥೇಣಿ (ತಮಿಳುನಾಡು): ಥೇಣಿ ಜಿಲ್ಲೆಯ 14 ವರ್ಷದ ಬಾಲಕ ಸ್ನೇಹನ್ ಈಜಿನಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ್ದಾನೆ. ಐರ್ಲೆಂಡ್‌ನ ಉತ್ತರ ಕ್ಯಾನಲ್ನಿಂದ ಸ್ಕಾಟ್ಲೆಂಡ್‌ಗೆ ಇರುವ 35 ಕಿ.ಮೀ. ದೂರವನ್ನು ಸುಮಾರು 14 ಗಂಟೆ 39 ನಿಮಿಷಗಳಲ್ಲಿ ಈಜಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ.
ಸ್ನೇಹನ್ ಈಗಾಗಲೇ ಈಜಿನಲ್ಲಿ ಹಲವು ಸಾಧನೆ ಮಾಡಿದ್ದು, ಕೆಲವು ವರ್ಷಗಳ ಹಿಂದೆ ಬಾಗ್ ಜಲಸಂಧಿಯನ್ನು ದಾಟಿ ಸಾಧನೆ ಮಾಡಿದ್ದನು. ಇದೀಗ ಐರ್ಲೆಂಡ್‌ನ ಉತ್ತರ ಚಾನಲ್‌ನಿಂದ ಸ್ಕಾಟ್ಲೆಂಡ್‌ಗೆ ಇರುವ 35 ಕಿ.ಮೀ ದೂರ ಈಜಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದ್ದಾನೆ.