ನವದೆಹಲಿ:ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆಯ ಅಡಿಯಲ್ಲಿ ದೇಶದಲ್ಲಿ 2014 ಮತ್ತು 2019ರ ನಡುವೆ ಸುಮಾರು 326 ದೂರುಗಳು ದಾಖಲಾಗಿವೆ. ಕೇವಲ 6 ಮಂದಿ ಮಾತ್ರ ಅಪರಾಧಿಗಳು ಎಂದು ಸಾಬೀತಾಗಿದೆ.
ಐಪಿಸಿ ಸೆಕ್ಷನ್ 124(ಎ)ನಲ್ಲಿರುವ ದೇಶದ್ರೋಹ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಬ್ರಿಟೀಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಕೆಯಾಗುತ್ತಿದ್ದ ಕಾನೂನಿನ ಅವಶ್ಯಕತೆ ಈಗ ಏನಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿತ್ತು.
ಕೇಂದ್ರ ಗೃಹ ಇಲಾಖೆಯ ಮಾಹಿತಿಯಂತೆ 2014-2019ರ ನಡುವೆ ಸುಮಾರು 326 ದೇಶದ್ರೋಹ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಅಸ್ಸಾಂನಲ್ಲಿ ಅತಿ ಹೆಚ್ಚು ಅಂದರೆ 54 ಪ್ರಕರಣಗಳು ದಾಖಲಾಗಿವೆ. ಈ ಆರು ವರ್ಷಗಳಲ್ಲಿ 141 ಮಂದಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿದ್ದು, ಕೇವಲ 6 ಮಂದಿ ಅಪರಾಧಿಗಳೆಂದು ಸಾಬೀತಾಗಿದೆ.