ಜೈಪುರ್(ರಾಜಸ್ಥಾನ):ಕೋವಿಡ್ ವ್ಯಾಕ್ಸಿನ್ಗೂ ಕನ್ನ ಹಾಕಿರುವ ಭೂಪರು ಬರೋಬ್ಬರಿ 320 ಡೋಸ್ ಕಳ್ಳತನ ಮಾಡಿರುವ ಘಟನೆ ರಾಜಸ್ಥಾನ ಜೈಪುರದಲ್ಲಿ ನಡೆದಿದೆ.
ಕೋವಿಡ್ ವ್ಯಾಕ್ಸಿನ್ಗೂ ಕನ್ನ: 320 ಡೋಸ್ ಲಸಿಕೆ ಕಳ್ಳತನ ಮಾಡಿದ ಭೂಪರು! - ಕೋವಿಡ್ ವ್ಯಾಕ್ಸಿನ್ ಕಳ್ಳತನ
ಸರ್ಕಾರಿ ಆಸ್ಪತ್ರೆಯಿಂದಲೇ 320 ಕೋವಿಡ್ ವ್ಯಾಕ್ಸಿನ್ ಕಳ್ಳತನ ಮಾಡಿರುವ ಪ್ರಕರಣ ರಾಜಸ್ಥಾನದಲ್ಲಿ ನಡೆದಿದ್ದು, ಇದೀಗ ಪ್ರಕರಣ ದಾಖಲಾಗಿದೆ.
![ಕೋವಿಡ್ ವ್ಯಾಕ್ಸಿನ್ಗೂ ಕನ್ನ: 320 ಡೋಸ್ ಲಸಿಕೆ ಕಳ್ಳತನ ಮಾಡಿದ ಭೂಪರು! covaxin vaccine stolen in rajasthan](https://etvbharatimages.akamaized.net/etvbharat/prod-images/768-512-11401094-thumbnail-3x2-wdfdfdfd.jpg)
ಇಲ್ಲಿನ ಹರಿ ಬಕ್ಸ್ ಕನ್ವಾಟಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯಕೀಯ ಮುಖ್ಯ ಅಧಿಕಾರಿ ನಾರೋತ್ತಮ್ ಶರ್ಮಾ, 320 ಕೋವಿಡ್ ಡೋಸ್(ಕೊವ್ಯಾಕ್ಸಿನ್) ಕಣ್ಮರೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ವ್ಯಾಕ್ಸಿನ್ ಕೊರೆತೆ ಇದೆ ಎಂದು ಈಗಾಗಲೇ ಅಲ್ಲಿನ ಸರ್ಕಾರ ಹೇಳಿದ್ದು, ಹೆಚ್ಚಿನ ಡೋಸ್ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಸಹ ಮಾಡಿದೆ. ಇದರ ಮಧ್ಯೆ ಇದೀಗ ಲಸಿಕೆ ಕಳ್ಳತನವಾಗಿರುವುದು ದಿಗ್ಬ್ರಮೆ ಮೂಡಿಸಿದೆ. ಮಹಾರಾಷ್ಟ್ರದ ನಂತರ ರಾಜಸ್ಥಾನಕ್ಕೆ ಕೇಂದ್ರ ಸರ್ಕಾರ ಅತಿ ಹೆಚ್ಚು ಕೋವಿಡ್ ವ್ಯಾಕ್ಸಿನ್ ನೀಡಿದ್ದು, ಇಲ್ಲಿಯವರೆಗೆ 10 ಲಕ್ಷ ಡೋಸ್ ವ್ಯಾಕ್ಸಿನ್ ರವಾನೆ ಮಾಡಿದೆ.