ಕರ್ನಾಟಕ

karnataka

By

Published : May 30, 2021, 10:05 AM IST

ETV Bharat / bharat

ಕೊರೊನಾ ಎರಡನೇ ಅಲೆಗೆ ದೆಹಲಿಯಲ್ಲಿ 32 ಮಕ್ಕಳು ಅನಾಥ

ದೆಹಲಿ ಮಕ್ಕಳ ಹಕ್ಕುಗಳ ಆಯೋಗವು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದ 32 ಮಕ್ಕಳನ್ನು ಗುರುತಿಸಿದೆ. ಹತ್ತು ಮಕ್ಕಳು ಒಂಟಿ ಪೋಷಕರೊಂದಿಗೆ ವಾಸಿಸುತ್ತಿದ್ದು ಈಗ ಅವರನ್ನೂ ಕಳೆದುಕೊಂಡಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ಅನುರಾಗ್ ಕುಂಡು ಹೇಳಿದ್ದಾರೆ.

Chief Minister Arvind Kejriwal
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ :ಕೊರೊನಾ ಎರಡನೇ ಅಲೆ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಅಲೆಗೆ ಈಗಾಗಲೇ ದೇಶದಾದ್ಯಂತ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ಪ್ರತಿನಿತ್ಯ 3,000ಕ್ಕೂ ಅಧಿಕ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಾರಕ ಕೊರೊನಾ ವೈರಸ್​ಗೆ ಒಂದೇ ಕುಟುಂಬದ ಅನೇಕರು ಹಾಗೂ ತಂದೆ-ತಾಯಿ ಒಟ್ಟಿಗೆ ಮೃತಪಟ್ಟಿದ್ದಾರೆ. ಈ ನಡುವೆ ದೆಹಲಿಯಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ 32 ಮಕ್ಕಳು ಅನಾಥರಾಗಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ಅನುರಾಗ್ ಕುಂಡು ತಿಳಿಸಿದರು.

ದೆಹಲಿ ಮಕ್ಕಳ ಹಕ್ಕುಗಳ ಆಯೋಗವು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದ 32 ಮಕ್ಕಳನ್ನು ಗುರುತಿಸಿದೆ. ಹತ್ತು ಮಕ್ಕಳು ಒಂಟಿ ಪೋಷಕರೊಂದಿಗೆ ವಾಸಿಸುತ್ತಿದ್ದು ಈಗ ಅವರನ್ನೂ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

"ಕೋವಿಡ್​ ಎರಡನೇ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಹದಿನಾರು ಮಕ್ಕಳನ್ನು ಗುರುತಿಸಲಾಗಿದೆ. ಅವರ ಬಗ್ಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದ್ದು, ಅವರಿಗೆ ಅವಶ್ಯಕವಿರುವ ವೈದ್ಯಕೀಯ ಚಿಕಿತ್ಸೆ, ಪಡಿತರ, ಅವರಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ವಿಚಾರಿಸುತ್ತಿದ್ದೇವೆ" ಎಂದು ಡಿಸಿಪಿಸಿಆರ್ ಸದಸ್ಯ ರಂಜನಾ ಪ್ರಸಾದ್ ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದ ಮಕ್ಕಳ ಶಿಕ್ಷಣ ಮತ್ತು ಪಾಲನೆ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇ 14 ರಂದು ಹೇಳಿದ್ದಾರೆ. ಅಂತಹ ಮಕ್ಕಳಿಗೆ ತಿಂಗಳಿಗೆ 2,500 ರೂ.ಗಳನ್ನು ನೀಡಲು ಸರ್ಕಾರ ಯೋಜಿಸಿದೆ ಮತ್ತು ಈ ಪ್ರಸ್ತಾಪವು ಶೀಘ್ರದಲ್ಲೇ ಸಂಪುಟದ ಅನುಮೋದನೆಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

COVID-19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾಗಿ ಉಳಿದಿರುವ ಮಕ್ಕಳ ಅಗತ್ಯತೆಗಳನ್ನು ಪೂರೈಸಲು ಸಹಾಯವಾಣಿ ಸಂಖ್ಯೆ (+91 9311551393) ಯನ್ನು ಪ್ರಾರಂಭಿಸಲಾಗಿದೆ. ಸಹಾಯವಾಣಿಗೆ ಈವರೆಗೆ 2,200 ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ.

ABOUT THE AUTHOR

...view details