ಮೇಷ: ಇಂದು ನೀವು ನಿಮ್ಮ ಮೌಲ್ಯವನ್ನು ಪ್ರದರ್ಶಿಸುತ್ತೀರಿ. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಮಹತ್ತರ ಯೋಜನೆಗಳನ್ನು ರೂಪಿಸುತ್ತೀರಿ. ಈ ದಿನ ನಿಮಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ಆದರೂ ಸಹ ನೀವು ಅಗತ್ಯವಾದ ಮಾನ್ಯತೆಯನ್ನು ಪಡೆಯುವುದಿಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ನಿರುತ್ಸಾಹಗೊಳ್ಳದೆ ಹಿನ್ನಡೆ ಎದುರಿಸುವುದನ್ನು ಕಲಿಯಿರಿ.
ವೃಷಭ: ಈ ದಿನ ನಿಮಗೆ ಮಿಶ್ರ ಫಲಗಳು ಸಿಗಲಿವೆ. ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಭಯ ಪಡಿಬೇಡಿ.
ಮಿಥುನ: ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಪರಿಪೂರ್ಣತೆಯನ್ನು ಬಯಸುತ್ತೀರಿ. ಮತ್ತು ಈ ತತ್ವವನ್ನು ನಿಮ್ಮ ಜೀವನದ ಪ್ರತಿ ಆಯಾಮದಲ್ಲೂ ಅಭ್ಯಾಸ ಮಾಡಿಕೊಂಡಿದ್ದೀರಿ. ನಿಮ್ಮ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಿಮ್ಮ ಎಲ್ಲಾ ಶಕ್ತಿಯನ್ನು ಕ್ರೋಢೀಕರಿಸುವುದನ್ನು ದೃಢಪಡಿಸಿಕೊಳ್ಳಿ.
ಕರ್ಕಾಟಕ: ನೀವು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ಕೆಲಸದಲ್ಲಿ ಕೆಲ ಕಾಲ ವ್ಯಸ್ತರಾಗಿರುತ್ತೀರಿ. ಬಿಡುವಿಲ್ಲದ ಕೆಲಸದಿಂದ ನಿತ್ರಾಣಗೊಳ್ಳುತ್ತೀರಿ. ಆದ್ದರಿಂದ ಅದು ನಿಮಗೆ ಸಾಕಷ್ಟು ಒತ್ತಡ ಮತ್ತು ಆತಂಕ ಉಂಟು ಮಾಡುತ್ತದೆ.
ಸಿಂಹ: ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನ ನಡೆಸುವಾಗ ಕೆಲ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಂದು ಪ್ರಣಯಕ್ಕೆ ಮತ್ತು ಪ್ರೀತಿಯ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ದಿನ.
ಕನ್ಯಾ: ಭಯ ನಿಮ್ಮ ಮನಸ್ಸನ್ನು ಕಾಡುತ್ತಿರುತ್ತದೆ. ನಿಮ್ಮ ವಿದೇಶಿ ಮಿತ್ರರಿಗೆ ನೀವು ಅತಿಯಾಗಿ ಖರ್ಚು ಮಾಡುತ್ತೀರಿ. ಈ ನಿಟ್ಟಿನಲ್ಲಿ ಇಂದು ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.