ಔರೈಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಔರೈಯಾದ ಬಿದುನಾದಲ್ಲಿ 31 ವರ್ಷದ ರಕ್ಷಾ ಸೋಲಂಕಿ ಎಂಬ ಮಹಿಳೆ ಶ್ರೀ ಕೃಷ್ಣನ ವಿಗ್ರಹದ ಜೊತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ್ದಿದ್ದಾರೆ. ಈ ವಿಶೇಷ ಕ್ಷಣಕ್ಕೆ ವಧುವಿನ ಕುಟುಂಬದವರು ಮತ್ತು ಅಕ್ಕಪಕ್ಕದ ಮನೆಯವರು ಸಾಕ್ಷಿಯಾದರು.
ಈ ಮದುವೆ ಬಗ್ಗೆ ವಧುವಿನ ತಂದೆ ರಂಜಿತ್ ಸಿಂಗ್ ಮಾತನಾಡಿ, ‘‘ನನ್ನ 31 ವರ್ಷದ ಮಗಳು ರಕ್ಷಾ ಸೋಲಂಕಿ ಬಾಲ್ಯದಿಂದಲೂ ಕೃಷ್ಣನ ಭಕ್ತಿಯಲ್ಲಿ ಮುಳುಗಿದ್ದಳು. ನಂತರ ಶ್ರೀ ಕೃಷ್ಣನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಳು, ನಂತರ ಮನೆಯವರೆಲ್ಲ ನಿರ್ಧರಿಸಿ ಪುರೋಹಿತರನ್ನು ಮನೆಗೆ ಕರೆಸಿ ಹಿಂದೂ ಸಂಪ್ರದಾಯದ ಪ್ರಕಾರ ಬೆಂಕಿಯ ಸಾಕ್ಷಿಯಾಗಿ ಏಳು ಸುತ್ತು ಹಾಕಿದಳು. ಮಗಳ ನಿರ್ಧಾರದಿಂದ ಬಹಳ ಸಂತೋಷವಾಗಿದೆ. ಈಗ ಭಗವಾನ್ ಶ್ರೀ ಕೃಷ್ಣ ನನ್ನ ಅಳಿಯಾನಾಗಿದ್ದಾನೆ’’ ಎಂದು ಹೇಳಿದರು.
ಮದುವೆ ನಂತರ ವಧು ಹೇಗೆ ವರನ ಮನೆಗೆ ಹೋಗುತ್ತಾರೆ, ಅದೇ ರೀತಿ ಈ ಮದುವೆಯಲ್ಲೂ ಕೂಡ ನಡೆದಿದು ಕುಟುಂಬಸ್ಥರು ಸಾಂಪ್ರದಾಯಿಕವಾಗಿ ವಧುವನ್ನು ಬೀಳ್ಕೊಟ್ಟರು. ಶ್ರೀ ಕೃಷ್ಣನ ವಿಗ್ರಹದ ಜೊತೆಗೆ ಮದುವೆವಾದ ರಕ್ಷಾ ಸೋಲಂಕಿ ತನ್ನ ಸಂಬಂಧಿಕರ ಮನೆಗೆ ತೆರಳಿದಳು.
ಕನಸಿನಲ್ಲಿ ಬರುತ್ತಿದ್ದ ಶ್ರೀ ಕೃಷ್ಣ: ‘‘ರಕ್ಷಾನನ್ನು ನಾವು ಬೇರೆ ವರವ ಜೊತೆ ಮದುವೆ ಮಾಡಲು ನಿರ್ಧರಿಸಿದ್ದೆವು. ಆದರೆ, ಕೆಲವು ದಿನಗಳ ಹಿಂದೆ ಶ್ರೀ ಕೃಷ್ಣನು ತನ್ನ ಕೊರಳಿಗೆ ಹೂವಿನ ಮಾಲೆಯನ್ನ ಹಾಕಿದ ಹಾಗೆ ಕನಸು ಬಿದ್ದಿತ್ತು ಎಂದು ತಿಳಿಸಿದಳು. ನಂತರ ಅವಳ ಇಚ್ಛೆಯಂತೆ ಶ್ರೀ ಕೃಷ್ಣನ ವಿಗ್ರಹದ ಜೊತೆ ಮದುವೆಯಾಗಿ ಸಂತೋಷವಾಗಿದ್ದಾಳೆ’’ ಎಂದು ವಧುವಿನ ತಂದೆ ತಿಳಿಸಿದರು.