ಕರ್ನಾಟಕ

karnataka

By PTI

Published : Oct 7, 2023, 10:29 PM IST

ETV Bharat / bharat

ಸಿಕ್ಕಿಂ ಮೇಘಸ್ಫೋಟ : ನಾಪತ್ತೆಯಾಗಿದ್ದ 62 ಮಂದಿ ಜೀವಂತ ಪತ್ತೆ.. ಮೃತರ ಸಂಖ್ಯೆ 30ಕ್ಕೆ ಏರಿಕೆ

ಸಿಕ್ಕಿಂನಲ್ಲಿ ಹಠಾತ್​ ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ. ಒಟ್ಟು 81 ಮಂದಿ ನಾಪತ್ತೆಯಾಗಿದ್ದಾರೆ.

Etv Bharat
Etv Bharat

ಸಿಕ್ಕಿಂ (ಗ್ಯಾಂಗ್ಟಕ್) : ಸಿಕ್ಕಿಂನಲ್ಲಿ ಮೇಘ ಸ್ಪೋಟದಿಂದಾಗಿ ಉಂಟಾದ ಪ್ರವಾಹದಿಂದಾಗಿ ಮೃತರ ಸಂಖ್ಯೆ 30ಕ್ಕೆ ಏರಿಕೆ ಆಗಿದೆ. ಶನಿವಾರ ಮತ್ತೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 62 ಜನರು ಜೀವಂತವಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಸದ್ಯ 81 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಅಂತರ್​ ಸಚಿವಾಲಯದ ಕೇಂದ್ರ ತಂಡವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್​ ಮಿಶ್ರಾ ತಿಳಿಸಿದ್ದಾರೆ. ಕಳೆದ ಬುಧವಾರ ಸಂಭವಿಸಿದ ಮೇಘಸ್ಫೋಟದಿಂದ ಹಠಾತ್ ಉಂಟಾದ ಪ್ರವಾಹದಿಂದ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದೆ. ಇದು ಸುಮಾರು 42 ಸಾವಿರ ಜನರ ಮೇಲೆ ಪರಿಣಾಮ ಬೀರಿದೆ. ಮಂಗನ್​ ಜಿಲ್ಲೆಯೊಂದರಲ್ಲೇ 30 ಸಾವಿರಕ್ಕೂ ಅಧಿಕ ಜನರು ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದಾರೆ.

ಗ್ಯಾಂಗ್ಟಕ್​, ಪಾಕ್ಯೊಂಗ್​ ಮತ್ತು ನಾಮ್ಚಿ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದ್ದು, ಒಟ್ಟು 30 ಮಂದಿ ಸಾವನ್ನಪ್ಪಿದ್ದಾರೆ. ಮಂಗನ್​ನಲ್ಲಿ ನಾಲ್ವರು ಸಾವನ್ನಪ್ಪಿದ್ದು, ಗ್ಯಾಂಗ್ಟಕ್​​ನಲ್ಲಿ 6, ಪಾಕ್ಯೊಂಗ್​ ಜಿಲ್ಲೆಯಲ್ಲಿ 19, ನಾಮ್ಚಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.ಪಾಕ್ಯೊಂಗ್​ನಲ್ಲಿ ಸಾವನ್ನಪ್ಪಿದ್ದ 19 ಜನರಲ್ಲಿ 9 ಮಂದಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್​ 3ರಂದು 23 ಸೈನಿಕರು ನಾಪತ್ತೆಯಾಗಿದ್ದರು.

ಇಲ್ಲಿಯವರೆಗೆ 2563 ಜನರನ್ನು ವಿವಿಧ ಸ್ಥಳಗಳಿಂದ ರಕ್ಷಿಸಲಾಗಿದೆ. 6875 ಜನರನ್ನು ಇಲ್ಲಿನ 30 ನಿರಾಶ್ರಿತ ಶಿಬಿರದಲ್ಲಿ ಇರಿಸಲಾಗಿದೆ. ಒಟ್ಟು 1320 ಮನೆಗಳು ಹಾನಿಯಾಗಿದ್ದು, 4 ಜಿಲ್ಲೆಗಳ 13 ಸೇತುವೆಗಳು ಕೊಚ್ಚಿಹೋಗಿವೆ. 3000ಕ್ಕೂ ಅಧಿಕ ಪ್ರವಾಸಿಗರು ಮಂಗನ್​ ಜಿಲ್ಲೆಯ ಲಾಚೆನ್​ ಮತ್ತು ಲಾಚುಂಗ್​ ನಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆ ಪಡೆಗಳು ಎಂಐ 17 ಹೆಲಿಕಾಪ್ಟರ್​ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದ ಸಿಎಂ ಪ್ರೇಮ್​ ಸಿಂಗ್ ತಮಾಂಗ್​​​ , ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ವೀಕ್ಷಿಸಿದರು. ಇದೇ ವೇಳೆ ಸಿಎಂ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಮತ್ತು ನಿರಾಶ್ರಿತ ಶಿಬಿರದಲ್ಲಿರುವ ಸಂತ್ರಸ್ತರಿಗೆ 2000 ರೂ. ಪರಿಹಾರ ಘೋಷಣೆ ಮಾಡಿದರು.

ಇದನ್ನೂ ಓದಿ :ಸಿಕ್ಕಿಂ ಮೇಘಸ್ಪೋಟ : 14 ಜನರ ಸಾವು, 100ಕ್ಕೂ ಹೆಚ್ಚು ಜನರು ನಾಪತ್ತೆ.. ಬಂಗಾಳದಲ್ಲಿ 10,000 ಮಂದಿ ಸ್ಥಳಾಂತರ

ABOUT THE AUTHOR

...view details