ಕರ್ನಾಟಕ

karnataka

ETV Bharat / bharat

ಸೇನೆ-ಪೊಲೀಸರ ಜಂಟಿ ಕಾರ್ಯಾಚರಣೆ : 30 ಬಾಂಬ್​ಗಳು ವಶಕ್ಕೆ

ಪಶ್ಚಿಮ ಬಂಗಾಳ-ಜಾರ್ಖಂಡ್ ಗಡಿಯಲ್ಲಿರುವ ದುಬುರ್ಡಿ ಚೆಕ್ ಪೋಸ್ಟ್​ನಲ್ಲಿ ಬಸ್​ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಬಾಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಇಡೀ ರಾತ್ರಿ ಬಸ್​ನಲ್ಲಿದ್ದ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ..

30 ಬಾಂಬ್​ಗಳು ವಶಕ್ಕೆ
30 ಬಾಂಬ್​ಗಳು ವಶಕ್ಕೆ

By

Published : Aug 25, 2021, 4:27 PM IST

ಗಯಾ(ಬಿಹಾರ): ಸೇನೆ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಪಶ್ಚಿಮ ಬುರ್ದ್ವಾನ್ ಜಿಲ್ಲೆ ಮಾರ್ಗವಾಗಿ ಬಸ್​ನಲ್ಲಿ ಸಾಗಿಸುತ್ತಿದ್ದ 30 ಬಾಂಬ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಪಶ್ಚಿಮಬಂಗಾಳದಿಂದ ಈ ಬಸ್ ಬಿಹಾರದ ಗಯಾಕ್ಕೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದೆ. ಬಸ್​ನಲ್ಲಿ ಬಾಂಬುಗಳ ಸಾಗಾಟದ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ಹಾಗೂ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಬಸ್​ನಲ್ಲಿ ಸಿಕ್ಕ ಪತ್ರ

ಪಶ್ಚಿಮ ಬಂಗಾಳ-ಜಾರ್ಖಂಡ್ ಗಡಿಯಲ್ಲಿರುವ ದುಬುರ್ಡಿ ಚೆಕ್ ಪೋಸ್ಟ್​ನಲ್ಲಿ ಬಸ್​ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಬಾಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಇಡೀ ರಾತ್ರಿ ಬಸ್​ನಲ್ಲಿದ್ದ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರಿಗೆ ಬೆಂಕಿ.. ಸ್ವಲ್ಪದರಲ್ಲೇ ಇಬ್ಬರು ಬಚಾವ್​..

ಬಸ್​​ನಲ್ಲಿ ಒಂದು ಪತ್ರ ಪತ್ತೆಯಾಗಿದೆ. ಜಾರ್ಖಂಡ್ ನಿವಾಸಿ ಸಫಿ ಮೊಹಮ್ಮದ್ ಭಾಯ್​ಗೆ ಈ ಬಾಂಬ್​ಗಳನ್ನು ಕಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, 12461 ಎಂಬ ಕೋಡ್​ವರ್ಡ್​ ಇದ್ದು, ಒಂದು ಬಾಂಬ್​ಗೆ 1 ಸಾವಿರ ರೂಪಾಯಿ, ಮುಂಗಡವಾಗಿ 5 ಸಾವಿರ ರೂಪಾಯಿ ನೀಡಿದ್ದೀರಿ, ಉಳಿದ ಹಣವನ್ನು ಶೀಘ್ರವೇ ಕೊಡಿ ಎಂದು ಬರೆಯಲಾಗಿದೆ. ಜತೆಗೆ ಈ ಪತ್ರದಲ್ಲಿ ಕೋಲ್ಕತಾದ ಇಬ್ಬರು ನಿವಾಸಿಗಳ ಹೆಸರನ್ನೂ ಬರೆಯಾಗಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details