ರಾಂಚಿ:ರಾಂಚಿಯ ರುಕ್ಕಾ ಅಣೆಕಟ್ಟಿನಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ರಾಂಚಿಯ ಇರ್ಬಾದ ಎಹ್ತಿಶನ್ ಅಲಿ (18) ರಾಜಾ (28) ಮತ್ತು ಲಡ್ಡು (28) ಮೃತ ದುರ್ದೈವಿಗಳು. ಸ್ನಾನಕ್ಕೆ ಇಳಿದಾಗ ಎಹ್ತಿಶನ್ ಅಲಿ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ. ಈತನನ್ನು ಉಳಿಸಲು ಹೋದ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.