ಗುಜರಾತ್: ಜುನಾಗಡ್ ಜಿಲ್ಲೆಯ ಗಿರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 3 ವರ್ಷದ ಬಾಲಕಿ ಚಿರತೆ ದಾಳಿಯಿಂದ ಮೃತಪಟ್ಟಿದ್ದಾಳೆ.
ಗುಜರಾತ್ನಲ್ಲಿ ಚಿರತೆ ದಾಳಿಗೆ 3 ವರ್ಷದ ಬಾಲಕಿ ಬಲಿ - Leopard attack
ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕಿ ಚಿರತೆ ದಾಳಿಯಿಂದ ಮೃತಪಟ್ಟಿರುವ ಘಟನೆ ಗುಜರಾತ್‌ನ ಜುನಾಗಡ್ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಗುಜರಾತ್ನಲ್ಲಿ ಚಿರತೆ ದಾಳಿಗೆ 3 ವರ್ಷದ ಬಾಲಕಿ ಬಲಿ
ಗಿರ್-ವೆಸ್ಟ್ ಅರಣ್ಯ ವಿಭಾಗದ ಜಮ್ವಾಲಾ ವ್ಯಾಪ್ತಿಯ ದೇವ್ಲಿ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಆಟವಾಡುತ್ತಿದ್ದಾಗ ದಾಳಿ ನಡೆಸಿದ ಚಿರತೆ ಬಾಲಕಿಯನ್ನು ಸ್ವಲ್ಪ ದೂರ ಎಳೆದೊಯ್ದು ಕೊಂದು ಹಾಕಿದೆ.
ಸದ್ಯ ಚಿರತೆ ಸೆರೆಗೆ ಬೋನ್ ಇಟ್ಟು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕಿಯ ಪೋಷಕರು ನೆರೆಯ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಿಂದ ಕಬ್ಬು ಕಡಿಯುವ ಕೆಲಸಕ್ಕಾಗಿ ಬಂದಿದ್ದರು.