ಕರ್ನಾಟಕ

karnataka

ETV Bharat / bharat

ಬೀದಿ ನಾಯಿಗಳ ಅಟ್ಟಹಾಸ.. ಶ್ವಾನಗಳ ದಾಳಿಗೆ ಬಾಲಕಿ ಬಲಿ - ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ

ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದಿವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

3-year-old girl mauled to death by dogs in Delhi's Moti Nagar
ಬೀದಿ ನಾಯಿಗಳ ದಾಳಿಗೆ ದೆಹಲಿಯಲ್ಲಿ ಬಾಲಕಿ ಸಾವು

By

Published : Dec 21, 2021, 10:49 AM IST

ನವದೆಹಲಿ :ಬೀದಿ ನಾಯಿಗಳು ದಾಳಿಗೆ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿ ಪೊಲೀಸರ ಪ್ರಕಾರ, ಡಿಸೆಂಬರ್ 17ರ ಮಧ್ಯಾಹ್ನ 2.45ರ ಸುಮಾರಿಗೆ ಬೀದಿ ನಾಯಿಗಳು ಲಕ್ಷ್ಮಿ ಎಂಬ ಬಾಲಕಿ ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ ದಾಳಿ ಮಾಡಿವೆ. ಬಾಲಕಿಯನ್ನು ತಕ್ಷಣ ಎಬಿಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

ಪೊಲೀಸರು ಬಾಲಕಿಯ ಮೃತದೇಹವನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:Monkeys V/s Dogs : 300ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು

ABOUT THE AUTHOR

...view details